Witchcraft-ತನ್ನ ಮನೆಯಲ್ಲಿಯೇ ಮಹಿಳೆಯನ್ನು ಸಜೀವ ದಹನ ಮಾಡಿರುವ ಎದ್ದೆ ಝಲ್ ಎನ್ನಿಸುವ ಆಘಾತಕಾರಿ ಘಟನೆ ಶನಿವಾರ ಸಂಜೆ ಬಿಹಾರದಲ್ಲಿ ನಡೆದಿದೆ.
ಸ್ಥಳೀಯರು ಪರಿಶಿಷ್ಟ ಜಾತಿ ಸಮುದಾಯದ ಮಹಿಳೆ ಮೇಲೆ ವಾಮಾಚಾರ ಮಾಡಿರುವ ಆರೋಪದ ಹಿನ್ನಲೆ ಈ ಕೃತ್ಯ ಎಸಗಿರುವುದಾಗಿ ತಿಳಿದುಬಂದಿದೆ.
ಈ ಪ್ರದೇಶವು ಜಾರ್ಖಂಡ್ ಅರಣ್ಯಪ್ರದೇಶ ಹೊಂದಿಕೊಂಡಿದೆ , ಈ ಪ್ರಕರವು ಮೈಗ್ರಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಪಚ್ಮಾಹ್ ಗ್ರಾಮದಲ್ಲಿ ನಡೆದಿರುವುದಾಗಿ ತಿಳಿದು ಬಂದಿದೆ.
ಮೃತ ಮಹಿಳೆಯನ್ನು ಅರ್ಜುನ್ ದಾಸ್ ಅವರ 45ವರ್ಷದ ಪತ್ನಿ ರೀಟಾ ದೇವಿ ಎಂದು ಗುರುತಿಸಲಾಗಿದೆ. ಈ ಮಹಿಳೆಯ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ್ದು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಪೊಲೀಸ್ ತಂಡವನ್ನು ಅಲ್ಲಿನ ಜನ ಮರಳಿ ಆ ಜಾಗದಿಂದ ತೆರಳುವಂತೆ ಒತ್ತಾಯಿಸಿದ್ದಾರೆಂದು ತಿಳಿದು ಬಂದಿದೆ .
ಪರಿಸ್ಥಿತಿ ತಿಳಿದ ಪೊಲೀಸ್ ಅಧಿಕಾರಿಗಳು ಬಳಿಕ ಇಮಾಮ್ಗಂಜ್ ಎಸ್ಡಿಪಿಒ ಮನೋಜ್ ರಾಮ್ ನೇತೃತ್ವದಲ್ಲಿ ಆ ಸ್ಥಳಕ್ಕೆ ಹೆಚ್ಚಿನ ಅಧಿಕಾರಿಗಲೋಂದಿಗೆ ಆಗಮಿಸಿದ್ದಾರೆ.
ನಂತರ ಮಹಿಳೆಯ ಮೃತ ದೇಹವನ್ನು ಪತ್ತೆಹಚ್ಚಿದ್ದಾರೆ ಆಗ ಅವಳ ಮೃತ ದೇಹವುಸುಟ್ಟು ಕರಕಲಾದ ಸ್ಥಿತಿಯಲ್ಲಿ ದೊರಕಿದೆ . ತದ ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಗಯಾಕ್ಕೆ ಕಳುಹಿಸಿದರು
ಮೂಲ ಮಾಹಿತಿಯ ಪ್ರಕಾರ ಈ ಹಿಂದೆ ಅದೇ ಗ್ರಾಮದ ನಿವಾಸಿಯಾಗಿದ್ದ ಪರಮೇಶ್ವರ್ ಭುಯಾನ್ ಎನ್ನುವವರು ದೀರ್ಘಕಾಲದ ಅನಾರೋಗ್ಯಕ್ಕೆ ತುತ್ತಾಗಿ, ಕಳೆದ ತಿಂಗಳು ಮೃತಪಟ್ಟಿದ್ದರು. ಆದರೆ ಆ ವ್ಯಕ್ತಿಯ ಕುಟುಂಬ ಆವ್ಯಕ್ತಿಯ ಸಾವು ರೀಟಾ ದೇವಿ ವಾಮಾಚಾರ ಮಾಡಿ ಕೊಲೆ ಮಾಡಿರುವ ಮಾಡಿ, ಆಕೆಯನ್ನು ನಿನ್ನೆ ಕೊಂದಿದ್ದಾರೆ ಎಂದು ತಿಳಿದು ಬಂದಿದೆ.








