ಉಡುಪಿ – ಡೆಲ್ಟಾ ಪ್ಲಸ್ ಭೀತಿಯ ನಡುವೆಯೂ ಕೊರೊನಾ ನಿಯಮಾವಳಿ ಮರೆತ ಜನರು
ಸುಮಾರು ಎರಡು ತಿಂಗಳ ಕಟ್ಟುನಿಟ್ಟಿನ ಲಾಕ್ಡೌನ್ ಮುಕ್ತವಾಗುತ್ತಿದ್ದಂತೆ, ಉಡುಪಿ ಜಿಲ್ಲೆಯಲ್ಲಿ ಜನರ ಓಡಾಟ ಹೆಚ್ಚಾಗಿದ್ದು, ಜಿಲ್ಲೆಯಲ್ಲಿ ಜೀವನವು ಸಹಜ ಸ್ಥಿತಿಗೆ ಮರಳಿದೆ.
ನಗರದಲ್ಲಿ ವಾಹನಗಳ ಭಾರಿ ದಟ್ಟಣೆ ಕಂಡುಬಂದಿದ್ದು, ಹಲವಾರು ಮಂದಿ ಮಾಸ್ಕ್ ಧರಿಸದೆ ಓಡಾಟ ನಡೆಸುತ್ತಿರುವುದು ಕಂಡು ಬಂತು.
ಬಹುದಿನಗಳಿಂದ ಮುಚ್ಚಿದ್ದ ಮಾಲ್ಗಳು, ಬಟ್ಟೆ ಮಳಿಗೆ, ಚಪ್ಪಲಿ, ಜುವೆಲರಿ ಶಾಪ್, ಗ್ಯಾರೇಜ್ ಗಳು ಸೋಮವಾರದಿಂದ ಸೇವೆ ಪ್ರಾರಂಭಿಸಿದ್ದು, ಗ್ರಾಹಕರ ಸಂಖ್ಯೆ ಹೆಚ್ಚಿತ್ತು.

ಮದುವೆ ಸಮಾರಂಭಕ್ಕೆ ಅನುಮತಿ ಕಡ್ಡಾಯ
ಮದುವೆ ಹಾಗೂ ಶುಭ ಸಮಾರಂಭಗಳಿಗೆ 100 ಜನರಿಗೆ ಮೀರದಂತೆ ನಡೆಸಲು ಅವಕಾಶ ನೀಡಲಾಗಿದ್ದು, ಅನುಮತಿ ಪತ್ರ ಕಡ್ಡಾಯವಾಗಿದೆ. ಅನುಮತಿ ಪತ್ರಕ್ಕಾಗಿ ಕಾರ್ಯಕ್ರಮ ಆಯೋಜಿಸುವವರು ಆಮಂತ್ರಣ ಪತ್ರ ಅಥವಾ ಇತರ ಯಾವುದೇ ಸಂಬಂಧಿತ ದಾಖಲೆಗಳೊಂದಿಗೆ ಸಹಿ ಮಾಡಿದ ಅರ್ಜಿಯನ್ನು ಸಂಬಂಧಪಟ್ಟ ತಹಶೀಲ್ದಾರ್ಗೆ ಸಲ್ಲಿಸಬೇಕು.
ಚಿತ್ರಮಂದಿರಗಳು, ಸಿನೆಮಾ ಹಾಲ್ಗಳು, ಪಬ್ಗಳು, ಶೈಕ್ಷಣಿಕ ಸಂಸ್ಥೆಗಳು, ಟುಟೋರಿಯಲ್ಸ್, ಕಾಲೇಜುಗಳು ಮುಂದಿನ ಸೂಚನೆ ಬರುವವರೆಗೆ ಮುಚ್ಚಿರುತ್ತದೆ. ರಾತ್ರಿ 9ರಿಂದ ಬೆಳಗ್ಗೆ 5 ಗಂಟೆಯವರೆಗೆ ಜಿಲ್ಲೆಯಲ್ಲಿ ರಾತ್ರಿ ಕರ್ಫ್ಯೂ ಹೇರಲಾಗಿದೆ.
ಉಡುಪಿ ನಗರದಲ್ಲಿ ಖಾಸಗಿ ಬಸ್ಸುಗಳು ಹೆಚ್ಚಿನ ಸಂಖ್ಯೆಯಲ್ಲಿ ಓಡಾಟ ನಡೆಸಿದ್ದು, ಪ್ರಯಾಣಿಕರ ಸಂಖ್ಯೆಯೂ ಅಧಿಕವಾಗಿತ್ತು. ಸೋಮವಾರದಿಂದ ಬಸ್ಸುಗಳಲ್ಲಿ ಶೇ.100ರಷ್ಟು ಪ್ರಯಾಣಿಕರನ್ನು ತುಂಬಲು ಅವಕಾಶ ಕಲ್ಪಿಸಲಾಗಿದೆ.

ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ಕೊರೋನಾ ವೈರಸ್ ನಿಂದ ದೂರವಿರಲು ಸೇವಿಸಬೇಕಾದ ಆಹಾರ ಪದಾರ್ಥಗಳು#Saakshatv #healthtips #ImmunityBooster https://t.co/4qM5BBvir5
— Saaksha TV (@SaakshaTv) July 5, 2021
https://twitter.com/SaakshaTv/status/1411902767283806210?s=19
ರಕ್ತಹೀನತೆಯ ಲಕ್ಷಣಗಳು ಮತ್ತು ಅದಕ್ಕೆ ಪರಿಹಾರ#Saakshatv #healthtips #anemia https://t.co/UvtqBfbCP2
— Saaksha TV (@SaakshaTv) July 4, 2021
https://twitter.com/SaakshaTv/status/1411540520388661260?s=19
https://twitter.com/SaakshaTv/status/1411482902072811521?s=19
#Unlock #udupi








