WIvsIND : ವರ್ಕೌಟ್ ಆಗಲಿಲ್ಲ ಪ್ಲಾನ್… ಕೈ ಕೊಟ್ಟ ಓಪನರ್ಸ್ wivsind-Rishabh Pant Is Opening With Rohit Sharma
ಅಹ್ಮದಾಬಾದ್ ನ ನರೇಂದ್ರ ಮೋದಿ ಮೈದಾನಲ್ಲಿ ಇಂದು ಇಂಡೋ – ವಿಂಡೀಸ್ ಏಕದಿನ ಸರಣಿಯ ಎರಡನೇ ಪಂದ್ಯ ನಡೆಯುತ್ತಿದೆ.
ಟಾಸ್ ಗೆದ್ದಿರುವ ವೆಸ್ಟ್ ಇಂಡೀಸ್ ಮೊದಲು ಬೌಲಿಂಗ್ ಆಯ್ದುಕೊಂಡಿದೆ. ಅಂದಕೊಂಡಂತೆ ಟೀಂ ಇಂಡಿಯಾ ಆರಂಭಿಕ ಆಘಾತ ನೀಡಿದೆ.
ಅಂದಹಾಗೆ ನಿರೀಕ್ಷೆಯಂತೆ ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾದಲ್ಲಿ ಒಂದು ಬದಲಾವಣೆಯಾಗಿದೆ.
ಉಪನಾಯಕ ಕೆ.ಎಲ್.ರಾಹುಲ್ ತಂಡಕ್ಕೆ ವಾಪಸ್ ಆಗಿದ್ದಾರೆ. ಇಶಾನ್ ಕಿಶಾನ್ ಹೊರಗುಳಿದಿದ್ದಾರೆ.
ಇನ್ನು ಇಂದಿನ ಪಂದ್ಯದಲ್ಲಿ ಆರಂಭಿಕ ಜೋಡಿಯಲ್ಲಿ ಬದಲಾವಣೆ ಮಾಡುವುದಾಗಿ ರೋಹಿತ್ ಶರ್ಮಾ ಸುಳಿವು ನೀಡಿದ್ದರು.
ಅದರಂತೆ ಇಂದು ರಿಷಬ್ ಪಂತ್, ನಾಯಕ ರೋಹಿತ್ ಶರ್ಮಾ ಜೊತೆಗೆ ಇನ್ನಿಂಗ್ಸ್ ಓಪನ್ ಮಾಡಿದರು.
ಆದ್ರೆ ಟೀಂ ಇಂಡಿಯಾ ಪ್ಲಾನ್ ವರ್ಕೌಟ್ ಆಗಲಿಲ್ಲ.
ಯಾಕಂದ್ರೆ ರೋಹಿತ್ ಶರ್ಮಾ 8 ರನ್ ಗಳಿಗೆ ಸುಸ್ತಾದ್ರೆ, ರಿಷಬ್ ಪಂತ್, 18 ರನ್ ಗಳಿಗಿಸಿ ಪೆವಿಲಿಯನ್ ಸೇರಿಕೊಂಡಿದ್ದಾರೆ.
ಇಲ್ಲಿಗೆ ಇಂದಿನ ಪಂದ್ಯದಲ್ಲಿ ರೋಹಿತ್ ಪ್ಲಾನ್ ಪ್ಲಾಪ್ ಆಗಿದೆ.









