ಚಿಂತಾಮಣಿ | ಮನೆಯ ಹಿಂಭಾಗ ಗಾಂಜಾ ಬೆಳೆದ ಮಹಿಳೆ
ಚಿಕ್ಕಬಳ್ಳಾಪುರ : ಮನೆಯ ಹಿಂಭಾಗ ಗಾಂಜಾ ಗಿಡ ಬೆಳೆದಿದ್ದ ಮಹಿಳೆಯನ್ನು ಬಟ್ಲಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ಇರಗಂಪಲ್ಲಿ ಗ್ರಾಮದಲ್ಲಿ ವಿಜಯಮ್ಮ ಎಂಬ ಮಹಿಳೆ ತಮ್ಮ ಮನೆಯ ಹಿಂಭಾಗದಲ್ಲಿ ಗಾಂಜಾ ಬೆಳೆದಿದ್ದರು.
ಇದರ ಮಾಹಿತಿ ತಿಳಿದ ಬಟ್ಲಹಳ್ಳಿ ಠಾಣೆಯ ಸಬ್ ಇನ್ಸ್‍ಪೆಕ್ಟರ್ ನಾರಾಯಣ್ ಸ್ವಾಮಿ ಮತ್ತು ತಂಡ ದಾಳಿ ನಡೆಸಿ ಗಾಂಜಾ ಗಿಡವನ್ನು ವಶಕ್ಕೆ ಪಡೆದು, ಆರೋಪಿ ವಿಜಯಮ್ಮಳನ್ನು ಬಂಧಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ವಿಚಾರಣೆ ನಡೆಸಿದ್ದಾರೆ.
ಜಿಲ್ಲೆಯಲ್ಲಿ ಗಾಂಜಾ ಮಾರಾಟದ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿಬ್ಬಂದಿಗೆ ಸೂಚಿಸಿದ್ದಾರೆ. ಹಾಗಾಗಿ ಜಿಲ್ಲೆಯಲ್ಲಿ ಪೊಲೀಸರು ಕಾರ್ಯಪೌರುತ್ತರಾಗಿದ್ದಾರೆ.









