ಪುತ್ತೂರು ಮನೆಯ ಆವರಣ ಗೋಡೆ ಕುಸಿದು ಮಹಿಳೆ ಸಾವು
ಪುತ್ತೂರು, ಜುಲೈ 7: ಪುತ್ತೂರಿನ ಪರ್ಲಡ್ಕ ಗೋಳಿಕಟ್ಟೆಯಲ್ಲಿ ಮನೆಯೊಂದರ ಆವರಣ ಗೋಡೆ ಕುಸಿದು ಮಹಿಳೆಯೋರ್ವರು ಮೃತಪಟ್ಟ ಘಟನೆ ಇಂದು ನಡೆದಿದೆ.
ಪುತ್ತೂರು ಆಸುಪಾಸಿನಲ್ಲಿ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದ್ದು, ಇಂದು ಸುರಿದ ಭಾರಿ ಮಳೆಯಿಂದಾಗಿ ಮನೆಯ ಆವರಣ ಗೋಡೆ ಕುಸಿತಗೊಂಡಿದೆ ಎಂದು ತಿಳಿದುಬಂದಿದೆ. ಮೃತಪಟ್ಟ ಮಹಿಳೆ ಪುತ್ತೂರು ಕೆಎಸ್ಆರ್ ಟಿಸಿ ಬಸ್ ಕಂಡೆಕ್ಟರ್ ಚಂದ್ರಶೇಖರ ಪಿ ಅವರ ಪತ್ನಿ ವಸಂತಿ ಯಾನೆ ಶೋಭಾ. ಇವರು ಮನೆಯ
ಹಿಂಬದಿಯಲ್ಲಿ ಬೀಡಿ ಕಟ್ಟುತ್ತಿದ್ದ ವೇಳೆ ಮನೆಯ ಮೇಲ್ಬಾಗದಲ್ಲಿರುವ ಮನೆಯೊಂದರ ಆವರಣ ಗೋಡೆ ಕುಸಿದು ಬಿದ್ದಿದ್ದು, ವಸಂತಿ ಅವರು ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಶಾಸಕ ಸಂಜೀವ ಮಠಂದೂರು, ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ, ಸಹಾಯಕ ಆಯುಕ್ತರಾದ ಯತೀಶ್ ಉಳ್ಳಾಲ್, ತಹಶೀಲ್ದಾರ್ ರಮೇಶ್ ಬಾಬು, ನಗರಸಭೆ ಆಯುಕ್ತೆ ರೂಪ ಶೆಟ್ಟಿ, ನಗರಸಭೆ ಸದಸ್ಯೆ ದೀಕ್ಷಾ ಪೈ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.








