ಕಳೆದ ಶನಿವಾರದಿಂದ ನಾಪತ್ತೆಯಾಗಿದ್ದ ಮಹಿಳೆ ಇಂದು ನೇತ್ರಾವತಿ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೃತ ಮಹಿಳೆಯನ್ನು 49 ವರ್ಷದ ಗೋಪಿ ಪೂಜಾರಿ ಎಂದು ಗುರುತಿಸಲಾಗಿದೆ. ದಕ್ಷಿಣ ಕನ್ನಡದ ಬಿ. ಸಿರೋಡಿನ ಚಿಕ್ಕಯ್ಯಮಠ ಎಂಬಲ್ಲಿ ತಮ್ಮ ನೆಂಟರ ಮನೆಗೆ ತೆರಳಿದ್ದ ಮಹಿಳೆ ಶನಿವಾರದಿಂದ ಕಾಣೆಯಾಗಿದ್ದರು.
ಇದಾದ ಬಳಿಕ ಮಹಿಳೆಗಾಗಿ ಹುಡುಕಾಟ ನಡೆಸಿದ ವೇಳೆ ಆಕೆಯ ಶಾಲು ಹಾಗೂ ಬಳೆ ಪಾಣೆಮಂಗಳೂರು ನೂತನ ಸೇತುವೆ ಬಳಿ ಪತ್ತೆಯಾಗಿತ್ತು. ಹೀಗಾಗಿ ಆತ್ಮಹತ್ಯೆ ಮಾಡಿಕೊಮಡಿರುವ ಶಂಕೆಯ ಮೇಲೆ ಮುಳುಗುತಜ್ಞರು ಹಾಗೂ ಸ್ಥಳೀಯರು ಹುಡುಕಾಟ ನಡೆಸಿದ್ದರು ಯಾವುದೇ ಪ್ರಯೋಜನವಾಗಿರಲಿಲ್ಲ. ಇದೀಗ ಆಕೆಯ ಮೃತದೇಹ ತುಂಬೆ ಸಮೀಪ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದ್ದು, ಬಂಟ್ವಾಳ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.








