ಮೆಟಾ ಎಐನಿಂದಾಗಿ ಮಹಿಳೆಯೊಬ್ಬರ ಪ್ರಾಣ ಉಳಿದಿರುವ ಘಟನೆ ನಡೆದಿದೆ. ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಮಹಿಳೆಯ ಜೀವವನ್ನು ಮೆಟಾ ಎಐ ಉಳಿಸಿದೆ.
ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಪತ್ನಿಯನ್ನು ಪತಿ ತೊರೆದಿದ್ದಕ್ಕಾಗಿ ಮಹಿಳೆ ಆತ್ಮಹತ್ಯೆಗೆ ಮುಂದಾಗಿದ್ದರು. ವಿಡಿಯೋ ವೈರಲ್ ಆಗುತ್ತಿರುವಾಗಲೇ ಪೊಲೀಸ್ ಮಹಾನಿರ್ದೇಶನಾಲಯದ ಕಚೇರಿಯ ಸಾಮಾಜಿಕ ಮಾಧ್ಯಮ ಕೇಂದ್ರಕ್ಕೆ ಮೆಟಾದಿಂದ ಅಲರ್ಟ್ ಬಂದಿದ್ದು, ಪೊಲೀಸರು ಕೂಡಲೇ ಗ್ರಾಮವನ್ನು ಪತ್ತೆ ಹಚ್ಚಿ ಸ್ಥಳಕ್ಕೆ ಆಗಮಿಸಿ ಬಾಲಕಿ ಆತ್ಮಹತ್ಯೆ ಮಾಡಿಕೊಳ್ಳದಂತೆ ತಡೆದಿದ್ದಾರೆ.
ಪೊಲೀಸ್ ತಂಡ ಆಕೆಯನ್ನು ಸುರಕ್ಷಿತವಾಗಿ ರಕ್ಷಿಸಿದೆ. ಮಹಿಳೆ ಆತ್ಮಹತ್ಯೆಗೆ ಯತ್ನಿಸುತ್ತಿದ್ದಾಗ ಆಕೆಯ ಕುಟುಂಬಸ್ಥರಿಗೆ ಆ ಸಮಯದಲ್ಲಿ ಏನೂ ಗೊತ್ತಾಗಿಲ್ಲ. ನಾಲ್ಕು ತಿಂಗಳ ಹಿಂದೆ ಆರ್ಯಸಮಾಜದ ದೇವಸ್ಥಾನದಲ್ಲಿ ವಿವಾಹವಾದ ಇಬ್ಬರೂ ಪತಿ-ಪತ್ನಿಯಾಗಿ ಒಟ್ಟಿಗೆ ವಾಸಿಸಲು ಆರಂಭಿಸಿದ್ದರು. ಆದರೆ, ಪತಿ ಮಹಿಳೆಯನ್ನು ಬಿಟ್ಟು ತನ್ನ ಮನೆಗೆ ಹೋಗಿದ್ದಾನೆ. ಅವಳನ್ನು ತೊರೆದ ನಂತರ ಮಹಿಳೆ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಳು. ಹೀಗಾಗಿಯೇ ಆತ್ಮಹತ್ಯೆಗೆ ಯತ್ನಿಸಿದ್ದಳು ಎಂದು ಪೊಲೀಸರು ಹೇಳಿದ್ದಾರೆ.