Woman’s World Cup: ಇಂಡೀಸ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ
ಹ್ಯಾಲಿಲ್ಟನ್ನ ಸೆಡಾನ್ ಪಾರ್ಕ್ನಲ್ಲಿ ಭಾರತದ ವನಿತೆಯರು ಅಬ್ಬರಿಸಿದ್ದಾರೆ.
ಮೊದಲು ಸ್ಮೃತಿ ಮಂಧಾನಾ ಮತ್ತು ಹರ್ಮನ್ ಪ್ರಿತ್ ಕೌರ್ ಕೆರಿಬಿಯನ್ ಬೌಲರ್ ಗಳ ಬೆಂಡೆತ್ತಿದರೆ, ಬಳಿಕ ಬೌಲರ್ ಗಳು ವಿಂಡೀಸ್ ಬ್ಯಾಟ್ಸ್ ಮನ್ ಗಳ ಮೇಲೆ ಸವಾರಿ ಮಾಡಿದರು.
ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ, ಆರಂಭದಲ್ಲೇ ಆಘಾತ ಅನುಭವಿಸಿತ್ತು.
78 ರನ್ ಗಳಿಸುವಷ್ಟರಲ್ಲಿ ಭಾರತ ತಂಡದ ಪ್ರಮುಖ ಮೂವರು ಆಟಗಾರ್ತಿಯರು ಪೆವಿಲಿಯನ್ ಸೇರಿಕೊಂಡಿದ್ದರು.
ಈ ಹಂತದಲ್ಲಿ ಸ್ಮತಿ ಮಂದಾನ, ಹರ್ಮನ್ ಪ್ರೀತ್ ಕೌರ್ ಜೊತೆ ಸೇರಿಕೊಂಡು 4ನೇ ವಿಕೆಟ್ 184 ರನ್ ಗಳ ದಾಖಲೆಯ ಜೊತೆಯಾಟವನ್ನು ಆಡಿದ್ರು.
ಸ್ಮತಿ ಮಂದಾನ ಅವರು 119 ಎಸೆತಗಳಲ್ಲಿ 13 ಬೌಂಡರಿ ಮತ್ತು 4 ಸಿಕ್ಸರ್ ಗಳ ಸಹಾಯದಿಂದ 123 ರನ್ ದಾಖಲಿಸಿದ್ರು.
ಇತ್ತ ಹರ್ಮನ್ ಪ್ರೀತ್ ಕೌರ್ 107 ಎಸೆತಗಳಲ್ಲಿ 10 ಬೌಂಡ್ರಿ ಮತ್ತು ಎರಡು ಸಿಕ್ಸರ್ ಗಳ ಸಹಾಯದಿಂದ 107 ರನ್ ಸಿಡಿಸಿದ್ರು.
ಇವರಿಬ್ಬರ ಶತಕದ ಸಂಭ್ರಮದೊಂದಿಗೆ ಟೀಂ ಇಂಡಿಯಾ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 317 ರನ್ ಗಳಿಸಿತ್ತು.
ಈ ಬೃಹತ್ ಮೊತ್ತದ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ಗೆ ಡಿಯಾಂಡ್ರ ಡಾಟಿನ್ ಮತ್ತು ಹೇಲಿ ಮ್ಯಾಥ್ಯೂಸ್ ಜೋಡಿ ಕೇವಲ 12.2 ಓವರುಗಳಲ್ಲಿ 100 ರನ್ಗಳನ್ನು ಕಲೆಹಾಕಿತ್ತು.
ಈ ಹಂತದಲ್ಲಿ ದಾಳಿಗಿಳಿದ ಸ್ನೇಹ್ ರಾಣಾ 62 ರನ್ಗಳಿಸಿದ್ದ ಡಾಟಿನ್ ವಿಕೆಟ್ ಪಡೆದು ಬ್ರೇಕ್ ತಂದು ಕೊಟ್ಟರು.
ಮೇಘನಾ ಸಿಂಗ್ ಕೆಸಿಯಾ ನೈಟ್ (5) ಮತ್ತು ನಾಯಕಿ ಸ್ಟೆಫಾನಿ ಟೇಲರ್ (1) ವಿಕೆಟ್ ಅನ್ನು ಪಡೆದು ವಿಂಡೀಸ್ ಮೇಲೆ ಒತ್ತಡ ಹೇರಿದರು.
43 ರನ್ಗಳಿಸಿ ಮುನ್ನಡೆಯುತ್ತಿದ್ದ ಹೇಲಿ ಮ್ಯಾಥ್ಯೂಸ್ ಸ್ನೇಹ್ ರಾಣಾ ಪಾಲಾಯಿತು. ಕ್ಯಾಂಬೆಲ್ (11), ಹೆನ್ರಿ (7) ಮತ್ತು ಅಲಿನ್ (4) ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ.
ಚೆಡಿಯಾ ನೇಷನ್ 19 ರನ್ ಗಳಿಸಿ ರನೌಟ್ ಬಲೆಯಲ್ಲಿ ಬಿದ್ದರು. ಸ್ನೇಹ್ ರಾಣಾ ಕಾನೆಲ್ ವಿಕೆಟ್ ಪಡೆಯುವ ಮೂಲಕ ವಿಂಡೀಸ್ 162 ರನ್ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಭಾರತ 155 ರನ್ಗಳ ಭರ್ಜರಿ ಜಯ ದಾಖಲಿಸಿತು.









