ಮುಚ್ಚಿಟ್ಟದ್ದ ರಹಸ್ಯ ಬಯಲಾಗಿದ್ದೇ ತಡ… ಆಕೆ ಮಾಡಿದ್ದು ಏನು ನೋಡಿ..!
ಆಂದ್ರಪ್ರದೇಶ: ಅಕ್ರಮಸಂಬಂಧದ ಬಗ್ಗೆ ವಾಟ್ಸಾಪ್ ಸ್ಟೇಸ್ ನಿಂದ ಬಯಲಾದ ಬೆನ್ನಲ್ಲೇ ಮಹಿಳೆಯೊಬ್ಬಳು ನೇಣಿಗೆ ಶರಣಾಗಿದ್ದಾಳೆ. ಆಂಧ್ರ ಪ್ರದೇಶದ ವಿಜಯವಾಡದ ವಂಬೆ ಕಾಲನಿಯಲ್ಲಿ ಈ ಘಟನೆ ನಡೆದಿದೆ.
ವೃತ್ತಿಯಲ್ಲಿ ಈವೆಂಟ್ ಡ್ಯಾನ್ಸರ್ ಆಗಿದ್ದ ಗಾಯತ್ರಿ ಎಂಬಾಕೆ ತನ್ನ ಅಕ್ರಮ ಸಂಬಂಧದ ಬಗ್ಗೆ ಬಯಲಾಗ್ತಿದ್ದಂತೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ವಂಬೆ ಕಾಲನಿಯ ಬನ್ನಿ ಡ್ಯಾನ್ಸ್ ಟ್ರೂಪ್ನಲ್ಲಿ ಡ್ಯಾನ್ಸರ್ ಆಗಿ ಕೆಲಸ ಮಾಡುತ್ತಿದ್ದ ಗಾಯತ್ರಿ ಸಂತೋಷ್ ಎಂಬಾತನ ಜೊತೆಗೆ ಕೆಲವು ವರ್ಷಗಳ ಹಿಂದೆ ಮದುವೆಯಾಗಿದ್ದಳು. ಆಕೆಗೆ ಇಬ್ಬರು ಮಕ್ಕಳು ಸಹ ಇದ್ದರು.
ಇತ್ತ ಬನ್ನಿ ಎಂಬಾತನ ಜೊತೆಗೆ ಗಾಯತ್ರಿಗೆ ಸ್ನೇಹ ಬೆಳೆದಿತ್ತು. ಬಳಿಕ ಸ್ನೇಹ ಮತ್ತೊಂದು ಹಂತಕ್ಕೆ ಮೀರಿತ್ತು. ಇಬ್ಬರ ನಡುವೆ ಅನೈತಿಕ ಸಂಬಂಧ ಬೆಳೆದಿತ್ತು. ಆದ್ರೆ ಇದನ್ನ ರಹಸ್ಯವಾಗಿಯೇ ಗಾಯತ್ರಿ ಕಾಪಾಡಿಕೊಂಡು ಬಂದಿದ್ದಳು. ಆದ್ರೆ ಇತ್ತೀಚೆಗಷ್ಟೇ ಗಾಯತ್ರಿ ಹಾಗೂ ಬನ್ನಿ ಜತೆಗಿರುವ ಫೋಟೋವನ್ನು ಯಾಮಾರಿ ತನ್ನ ವಾಟ್ಸ್ಆಯಪ್ ಸ್ಟೇಟಸ್ನಲ್ಲಿ ಶೇರ್ ಮಾಡಿಕೊಂಡಿದ್ದಳು.
ತಂಗಿಯ ಮೇಲೆ ಅಕ್ಕ ಹಾಗೂ ಆಕೆಯ ಸ್ನೇಹಿತರಿಂದಲೇ ನಿರಂತರ ಲೈಂಗಿಕ ದೌರ್ಜನ್ಯ ..!
ಇದನ್ನ ನೋಡಿದ ತಕ್ಷಣ ಸಿಟ್ಟಿಗೆದ್ದಿದ್ದ ಬನ್ನಿ ಪತ್ನಿ ನೀಲಿಮಾ, ಗಾಯತ್ರಿ ಮನೆಗೆ ನುಗ್ಗಿದ್ದಳು. ಇಬ್ಬರ ನಡುವೆ ದೊಡ್ಡ ಜಗಳವೇ ನಡೆದು ಹೋಗಿದೆ. ಇದಾದ ಬಳಿಕ ನೀಲಿಮಾ ಮನೆಯಿಂದ ಹೊರಟ ಬೆನ್ನಲ್ಲೇ ಗಾಯತ್ರಿ ನೇಣಿಗೆ ಶರಣಾಗಿದ್ದಾಳೆ.
ಇನ್ನೂ ಘಟನೆ ವೇಳೆ ಗಾಯತ್ರಿ ಪತಿ ಹಾಗೂ ಮಕ್ಕಳು ಹೊರಗಡೆ ಇದ್ದರು. ಬಳಿಕ ವಾಪಸ್ ಆದಾಗ ಗಾಯತ್ರಿ ನೇಣಿಗೆ ಶರಣಾಗಿದ್ದನ್ನ ನೋಡಿ ಪೊಲೀಸರಿಗೆ ತಿಳಿಸಿದ್ದಾನೆ.
ಇತ್ತ ನೀಲಿಮಾ ಗಾಯತ್ರಿಯನ್ನ ಹೀಯಾಳಿಸಿ ಅವಮಾನಿಸಿದ ಕಾರಣಕ್ಕೆ ಆಕೆ ನೇಣಿಗೆ ಶರಣಾಗಿದ್ದಾಳೆ ಎನ್ನಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡು ಗಾಯತ್ರಿ ಮೊಬೈಲ್ ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








