Crime : 3ನೇ ಪತಿಗಾಗಿ 2ನೇ ಗಂಡನಿಂದ ಪಡೆದ ಮಗು ಸುಟ್ಟು ಹಾಕಿದ ಪಾಪಿ…
2ನೇ ಪತಿಯಿಂದ ಪಡೆದಿದ್ದ 10 ವರ್ಷದ ಹೆಣ್ಣ ಮಗಳನ್ನ ಆಕೆಯ ಸ್ವಂತ ತಾಯಿ ಸುಟ್ಟು ಕೊಲೆ ಮಾಡಿ ರಾಕ್ಷಸತ್ವ ಮೆರೆದ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ.. 3ನೇ ಪತಿಗೆ ನಿಷ್ಠೆ ತೋರಿಸಲು 2ನೇ ಪತಿಯಿಂದ ಪಡೆದುಕೊಂಡಿದ್ದ ಮಗಳನ್ನ ಸುಟ್ಟು ಹಾಕಿದ್ದಾಳೆ.
3ನೇ ಪತಿಯು ತನ್ನ ಪರ ಆಕೆಯ ನಿಷ್ಠೆ ತೋರಿಸುವುದಕ್ಕೆ ಸಾಕ್ಷಿಯಾಗಿ ಮಗಳನ್ನು ಸುಟ್ಟು ಹಾಕುವಂತೆ ಕೇಳಿದ ಪರಿಣಾಮ ಇಂತಹ ಕೆಲಸ ,ಮಾಡಿದ್ದಾಳೆ. ನೆರೆಮನೆಯವರು ಬಾಲಕಿಯ ಕಿರುಚಾಟ ಕೇಳಿಸಿಕೊಂಡು ಸ್ಥಳಕ್ಕೆ ಓಡಿ ಬಂದು ತಕ್ಷಣ ಬಾಲಕಿಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಬಾಲಕಿ 75% ಸುಟ್ಟು ಹೋಗಿದ್ದು ಸೋಮವಾರ ಬೆಳಗ್ಗೆ ಸಾವನ್ನಪ್ಪಿದ್ದಾಳೆ. ಮತ್ತು ಮಲತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.
ಚೀನಾ ನಮ್ಮ ಪ್ರಜೆಗಳನ್ನು ಅಪಹರಿಸುತ್ತಿದ್ದರೆ, ಮೋದಿಜಿ ‘ಅಚ್ಛೇ ದಿನ್’ಗಾಗಿ ಕಾಯುತ್ತಿದ್ದಾರೆ: ರಾಹುಲ್ ಗಾಂಧಿ
5ನೇ ತರಗತಿ ವಿದ್ಯಾರ್ಥಿನಿ ಪವಿತ್ರಾ ಮೃತ ಬಾಲಕಿಯಾಗಿದ್ದಾಳೆ.. ಈಕೆ ತನ್ನ ತಾಯಿ ಜಯಲಕ್ಷ್ಮಿ (38) ಮತ್ತು ಮಲತಂದೆ ಪದ್ಮನಾಭನ್ ಜೊತೆಗೆ ವಾಸಿಸುತ್ತಿದ್ದಳು. ಜಯಲಕ್ಷ್ಮಿ 19 ವರ್ಷದವಳಿದ್ದಾಗ ಮೊದಲು ಪಾಲ್ವಣ್ಣನ್ ಎಂಬಾತನೊಂದಿಗೆ ಆಕೆಯ ವಿವಾಹವಾಗಿತ್ತು.. ಆದರೆ ಆತನನ್ನು ಬಿಟ್ಟು ಅವನ ಕಿರಿಯ ಸಹೋದರ ದುರೈರಾಜ್ ಜೊತೆ ಓಡಿ ಹೋಗಿ ವಿವಾಹವಾಗಿದ್ದಳು. ಇಬ್ಬರೂ ಮುಂಬೈನಲ್ಲಿ ವಾಸಿಸುತ್ತಿದ್ದರು. ಅಲ್ಲಿ ಜಯಲಕ್ಷ್ಮಿ ಪವಿತ್ರಾಗೆ ಜನ್ಮ ನೀಡಿದ್ದಾಳೆ.. ಬಳಿಕ ಆತನಿಂದಲೂ ದೂರಾಗಿ ಪದ್ಮನಾಭನ್ ಎಂಬಾತನ ಜೊತೆಗೆ ಇದ್ದಳು.. ಇದೀಗ ಆತನಿಗಾಗಿ ಮಗಳನ್ನ ಸುಟ್ಟು ಹಾಕಿದ್ದಾಳೆ.
ಎಲ್ಲ ಪುರುಷರನ್ನು ಅತ್ಯಾಚಾರಿಗಳೆಂದು ಕರೆಯುವುದು ಸರಿಯಲ್ಲ – ಸ್ಮೃತಿ ಇರಾನಿ
women kills her baby for 3rd husband – saakshatv









