ಚಿಕ್ಕಪ್ಪನ ಮಗನನ್ನೇ ಮದುವೆಯಾದ ಮಗಳ ಫೋಟೋದ ಅಂತ್ಯಸಂಸ್ಕಾರ ನೆರವೇರಿಸಿದ ಕುಟುಂಬ..!
ಜಾರ್ಖಂಡ್ : ಚಿಕ್ಕಪ್ಪನ ಮಕ್ಕಳು ದೊಡ್ಡಪ್ಪನ ಮಕ್ಕಳು ಎಂದ್ರೆ ಪರಸ್ಪರ ಸಹೋದರ ಸಹೋದರಿಯರ ಸಂಬಂಧವಿರುತ್ತೆ. ಆದ್ರೆ ಇಲ್ಲೊಬ್ಬ ಯುವತಿ ತನ್ನ ಸ್ವಂತ ಚಿಕ್ಕಪ್ಪನ ಮಗನನ್ನೇ ಮದುವೆಯಾಗಿ ಈ ಸಂಬಂಧಕ್ಕೆ ಮಸಿ ಬಳೆದ್ದಾಳೆಂದು ಆಕೆಯ ಮನೆಯವರು ಆಕೆಯ ಪ್ರತಿಕೃತಿಯನ್ನ ದಹಿಸಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಇಂತಹದೊಂದು ಘಟನೆ ಬೆಳಕಿಗೆ ಬಂದಿರೋದು ಜಾರ್ಖಂಡ್ ಛಾತ್ರಾ ಜಿಲ್ಲೆಯಲ್ಲಿ.
ಯುವತಿಯ ಕುಟುಂಬಸ್ಥರು ಆಕೆಯ ಪ್ರತಿಕೃತಿ ಮಾಡಿ ಶವಯಾತ್ರೆ ನಡೆಸಿ ಧಾರ್ಮಿಕ ಆಚರಣೆಗಳೊಂದಿಗೆ ಅಂತ್ಯಕ್ರಿಯೆ ಮಾಡಿ ಮುಗಿಸಿದ್ದಾರೆ. 25 ವರ್ಷದ ಸಬಿತಾ ಎಂಬಾಕೆ ತನ್ನ ಚಿಕ್ಕಪ್ಪನ ಮಗ ರಾಜ್ ದೀಪ್ ಕುಮಾರ್ ಎಂಬಾತನನ್ನ ಮದುವೆಯಾಗಿದ್ದಾಳೆ.
ಪ್ರೀತಿ ವಿಚಾರ ಗೊತ್ತಾಗ್ತಿದ್ದಂತೆ ಮನೆಮಂದಿಯಲ್ಲಾ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಕಡೆಯೂ ಯುವತಿ ಚಿಕ್ಕಪ್ಪನ ಮಗನನ್ನೇ ಮದುವೆಯಾಗಿದ್ದಾಳೆ. ಇದರಿಂದಾಗಿ ಆಕೆಯೊಂದಿಗಿನ ಎಲ್ಲಾ ಸಂಬಂಧಗಳನ್ನು ಕೊನೆಗೊಳಿಸಿಕೊಳ್ಳಲು ಮನೆಮಂದಿ ಫೋಟೋದ ಅಂತ್ಯಸಂಸ್ಕಾರ ನಡೆಸಿದ್ದಾರೆ.
‘ವಕೀಲ್ ಸಾಬ್’ ಮುಂದೆ ‘ಬಾಹುಬಲಿ’ಯ ರೆಕಾರ್ಡ್ ಪೀಸ್ ಪೀಸ್..!
ಅಪ್ರಾಪ್ತ ಪ್ರಿಯತಮೆ ಮೇಲೆ ಅತ್ಯಾಚಾರವೆಸಗಿ ಅತ್ಯಂತ ಕ್ರೂರವಾಗಿ ಕೊಲೆ ಮಾಡಿದ ಪಾಪಿ..!