ಪೊಲೀಸರಿಗೆ ಸೇಫ್ಟಿ ಇಲ್ಲಾ…! ಸಾರ್ವಜನಿಕರ ಕಥೆ ಏನು..? ಮಹಿಳಾ ಕಾನ್ಸ್ ಟೇಬಲ್ ಮೇಲೆ ಅತ್ಯಾಚಾರವೆಸಗಿದ ಸಬ್ ಇನ್ಸ್ ಪೆಕ್ಟರ್
ಪೊಲೀಸ್ ಇಲಾಖೆಯಲ್ಲಿಯೇ ಮಹಿಳಾ ಪೊಲೀಸ್ ಅಧಿಕಾರಿಗಳಿಗೆ ಪೊಲೀಸರಿಂದಲೇ ರಕ್ಷಣೆ ಇಲ್ಲದ ಪರಿಸ್ಥಿತಿಗೆ ಉದಾಹರಣೆಯಂಬಂತಹ ಪ್ರಕರಣವೊಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಹೌದು ಮಹಿಳಾ ಕಾನ್ಸ್ ಟೇಬಲ್ ಒಬ್ಬರು ದೆಹಲಿ ಸಬ್ ಇನ್ಸ್ ಪೆಕ್ಟರ್ ವಿರುದ್ಧ ಅತ್ಯಾಚಾರದ ಆರೋಪ ಮಾಡಿ ದೂರು ದಾಖಲಿಸಿದ್ದಾರೆ. ಮುನಿರ್ಕಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಮಹಿಳಾ ಕಾನ್ಸ್ ಟೇಬಲ್ , ಸಬ್ ಇನ್ಸ್ ಪೆಕ್ಟರ್ ಮನೋಜ್ ಎಂದು ಹೆಸರಿಸಿದ್ದಾರೆ.
ಮುನಿರಿಕಾದಲ್ಲಿ ರೂಮ್ ಒಂದಕ್ಕೆ ಕರೆದೊಯ್ದ ಮತ್ತು ಬರುವ ಪದಾರ್ಥ ನೀಡಿ ನಂತರ ಅತ್ಯಾಚಾರವೆಸಗಿರೋದಾಗಿ ಸಂತ್ರಸ್ತ ಕಾನ್ಸ್ ಟೇಬಲ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.. ಅಲ್ಲದೇ ಅಶ್ಲೀಲ ಫೋಟೋಗಳನ್ನ ಚಿತ್ರಿಸಿ ಬ್ಲಾಕ್ ಮೇಲ್ ಮಾಡಿದ್ದಾಗಿಯೂ ಆರೋಪಿಸಿದ್ದಾರೆ.. ಮಹಿಳಾ ಕಾನ್ಸ್ಟೇಬಲ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯಾಗಿರುವ ಪೊಲೀಸ್ ರನ್ನೂ ಇನ್ನೂ ವರೆಗೂ ಬಂಧಿಸಲಾಗಿಲ್ಲ.. ಪೊಲೀಸ್ ಮೂಲಗಳ ಪ್ರಕಾರ, ಸಂತ್ರಸ್ತ ಮಹಿಳಾ ಕಾನ್ಸ್ ಟೇಬಲ್ ಮತ್ತು ಆರೋಪಿ ಸಬ್ ಇನ್ಸ್‌ಪೆಕ್ಟರ್ ದೂರು ನೀಡಿರುವ ಪೊಲೀಸ್ ಠಾಣೆಯಲ್ಲಿ ಕೆಸಲಕ್ಕೆ ನೇಮಕಗೊಂಡಿದ್ದಾಗಿ ತಿಳಿದುಬಂದಿದೆ..