ಆರ್ಡರ್ ಮಾಡಿದ್ದು ಫ್ರೈಡ್ ಚಿಕನ್… ಬಂದಿದ್ದು ಟವಲ್ – VIRAL
ಆನ್ ಲೈನ್ ಸಾಪಿಂಗ್ , ಡಿಲೆವರಿಯಲ್ಲಿ ಆಗಾಗ ಏನಾದ್ರು ಎಡವಟ್ಟುಗಳಾಗುತ್ತಾ ಸೋಷಿಯಲ್ ಮಿಡಿಯಾದಲ್ಲಿ ಬಾರೀ ವೈರಲ್ ಆಗುತ್ತೆ.. ಈ ಬಾರಿ ಫ್ರೈಡ್ ಚಿಕನ್ ಸುದ್ದಿ ಸಿಕ್ಕಾಪಟ್ಟೆ ಚರ್ಚೆಯಾಗ್ತಿದೆ.
ಹೌದು.. ಮಹಿಳೆಯೊಬ್ಬರು ಫ್ರೈಡ್ ಚಿಕನ್ ಆರ್ಡರ್ ಮಾಡಿದ್ದರು.. ಆದ್ರೆ ಆ ಮಹಿಳೆಗೆ ಫ್ರೈಡ್ ಚಿಕನ್ ಬದಲಾಗಿ ಫ್ರೈಡ್ ಟವಲ್ ಬಂದಿದೆ.. ಇದನ್ನ ನೋಡಿದ ಮಹಿಳೆ ಶಾಕ್ ಆಗಿದ್ದು, ಇದರ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.. ಸದ್ಯ ಫಿಲಿಪೈನ್ಸ್‌ನಲ್ಲಿ ನಡೆದಿರುವ ಈ ಘಟನೆಯ ಫೋಟೋಗಳು ವೈರಲ್ ಆಗಿದೆ.
ಅಲೀಫರೇಜ್ ಎಂಬ ಮಹಿಳೆ ಫ್ರೈಡ್ ಚಿಕನ್ ಫುಡ್ ಆರ್ಡರ್ ಮಾಡಿದ್ದಾರೆ. ಆದರೆ ಡೀಪ್ ಫ್ರೈಡ್ ಚಿಕನ್ ಬದಲಾಗಿ, ಫ್ರೈಡ್ ಟವಲ್ ಸಿಕ್ಕಿದೆ. ಚಿಕನ್ ಅಂದುಕೊಂಡು ತಿನ್ನಲು ಶುರು ಮಾಡಿದಾಗ ವಿಚಿತ್ರವೆನಿಸಿ ಚಿಕನ್ ಬಿಡಿಸಿ ನೋಡಿ ಆಘಗಾತಕ್ಕೆ ಒಳಗಾಗಿದ್ದಾರೆ. ಅಲ್ಲಿ ಚಿಕನ್ ಬದಲಾಗಿ ಟವಲ್ ಇದ್ದದ್ದನ್ನ ನೊಡಿ ಗಾಬರಿಗೊಂಡಿದ್ದಾರೆ.
ಇದರ ವೀಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಜೊತೆಗೆ ಫುಡ್ ಆರ್ಡರ್ ಮಾಡಿದ ರೆಸ್ಟೋರೆಂಟ್ ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡಿದ್ದಾರೆ.
ನನ್ನ ಮಗನಿಗೆ ಫ್ರೈಡ್ ಚಿಕನ್ ಆರ್ಡರ್ ಮಾಡಿದ್ದೆ. ನಾನು ಫ್ರೈಡ್ ಚಿಕನ್ ತಿನ್ನಲು ಪ್ರಯತ್ನಿಸಿದಾಗ, ಅದ್ರಲ್ಲಿ ಕರಿದ ಟವೆಲ್ ನೋಡಿ ಸಾಕ್ ಆಯಿತು. ಇದು ನಿಜಕ್ಕೂ ಗೊಂದಲದ ಸಂಗತಿಯಾಗಿದೆ ಎಂದು ಬರೆದಕೊಂಡಿದ್ದಾರೆ.
https://www.facebook.com/aliquemarie/posts/10224110024393881
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.