ಇತ್ತೀಚೆಗೆ ಕೊರೊನಾ ಹಾವಳಿ ಹೆಚ್ಚಾದ ಹಿನ್ನೆಲೆ ದೇಶಾದ್ಯಂತ ಲಾಕ್ ಡೌನ್ ಮಾಡಲಾಗಿತ್ತು. ಇದೀಗ ಎಲ್ಲೆಡೆ ನಿಧಾನವಾಗಿ ಲಾಕ್ ಡೌನ್ ಸಡಿಲಿಕೆ ಮಾಡುತ್ತಿದ್ರು, ಶಾಲಾ ಕಾಲೇಜುಗಳನ್ನು ತೆರೆಯುವ ಸಾಹಸಕ್ಕೆ ಸರ್ಕಾರ ಮುಂದಾಗಿಲ್ಲ. ಇದರ ನಡುವೆ ಬಹುತೇಕ ಶಾಲಾ ಕೇಲೇಜುಗಳು ಆನ್ ಲೈನ್ ಶಿಕ್ಷಣದ ಮೊರೆ ಹೋಗಿವೆ. ಆದರೆ ಕೆಲ ಕುಟುಂಬಗಳು ಮಕ್ಕಳಿಗೆ ಆನ್ ಲೈನ್ ಶಿಕ್ಷಣ ಕೊಡಿಸಲು ಸ್ಮಾರ್ಟ್ ಫೋನ್ ಗಳ ಖರೀದಿಸಲು ಸಾಮರ್ಥ್ಯ ವಿಲ್ಲದೇ ಪರದಾಡುವಂತಾಗಿದೆ. ಹೀಗಿರುವ ಹಿಮಾಚಲ ಪ್ರದೇಶದಲ್ಲಿ ರೈತ ಹಸು ಮಾರಿ ಮಗಳಿಗೆ ಸ್ಮಾರ್ಟ್ ಫೋನ್ ಕೊಡಿಸಿದ್ದು, ತಾಯಿ ಒಬ್ಬರು ತಾಳಿ ಅಡವಿಟ್ಟು ಟಿವಿ ತಂದ ವಿಚಾರವೂ ಎಲ್ಲರಿಗೂ ಗೊತ್ತೇ ಇದೆ. ಈಗ ಈ ಸಾಲಿಗೆ ಮತ್ತೊಬ್ಬ ಮಹಿಳೆ ಸೇರ್ಪಡೆಗೊಂಡಿದ್ದು, ತನ್ನ ಮಗಳ ಆನ್ಲೈನ್ ಕ್ಲಾಸ್ ಗೆ ನೆರವಾಗುವ ಸಲುವಾಗಿ ಸ್ಮಾರ್ಟ್ ಫೋನ್ ಖರೀದಿ ಮಾಡಲು ತಮ್ಮ ಕಿವಿ ಓಲೆಗಳನ್ನು ಮಾರಿದ್ದಾರೆ. ಒಡಿಶಾದ ಭುವನೇಶ್ವರದ ಮಹಿಳೆ ರೀಟಾ ಅವರು ತಮ್ಮ 13 ವರ್ಷದ (8ನೇ ತರಗತಿ) ಮಗಳು ಅರ್ಚಿತಾಳಿಗೆ ಆನ್ಲೈನ್ ಕ್ಲಾಸ್ನಲ್ಲಿ ಶಿಕ್ಷಣ ಕೊಡಿಸಲು ಓಲೆಗಳನ್ನು ಮಾರಿ ಸ್ಮಾರ್ಟ್ಫೋನ್ ಖರೀದಿಸಿಕೊಟ್ಟಿದ್ದಾರೆ. ಮಗಳಿಗೆ ಶಿಕ್ಷಣ ಕೊಡುವುದಕ್ಕೆ ಪ್ರಮುಖ್ಯತೆ ಕೊಟ್ಟ ತಾಯಿ ತನಗೆ ತವರು ಮನೆಯಿಂದ ಕೊಟ್ಟಿದ್ದ ಹಾಗೂ ಇದ್ದ ಒಂದೇ ಒಂದು ಜೊತೆ ಬಂಗಾರದ ಓಲೆಗಳನ್ನು ಮಾರಿ ಮಾದರಿಯಾಗಿದ್ದಾರೆ.
ಬಿಜೆಪಿಯಲ್ಲಿ ಬಿರುಕು: ಅತೃಪ್ತ ನಾಯಕರ ‘ಬಣ’ ಕದನ
ಕರ್ನಾಟಕದ ಬಿಜೆಪಿ ಘಟಕದಲ್ಲಿ ಬಣ ರಾಜಕೀಯ ಮತ್ತೆ ಮುಂದುವರೆದಿದೆ. ಪಕ್ಷದೊಳಗಿನ ಅತೃಪ್ತ ನಾಯಕರು ಮಾಜಿ ಸಚಿವ ಕುಮಾರ್ ಬಂಗಾರಪ್ಪನವರ ನಿವಾಸದಲ್ಲಿ ಸಭೆ ಸೇರಿದ್ದು, ಈ ಸಭೆ ಹಲವು...