ಲಕ್ನೋ: ನಾಯಿ ಮರಿಗಳು ಹೆಚ್ಚು ಅಳುತ್ತಿವೆ ಎಂಬ ಕಾರಣಕ್ಕೆ ಇಬ್ಬರು ಮಹಿಳೆಯರು ಹಾಗೂ ಸಿಐಎಸ್ಎಫ್ ಸಿಬ್ಬಂದಿ ಸೇರಿ 5 ನಾಯಿ ಮರಿಗಳನ್ನು ಸಜೀವ ದಹನ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ಉತ್ತರಪ್ರದೇಶದ (Uttar Pradesh) ಮೀರತ್ (Meerut) ಜಿಲ್ಲೆಯ ಕಂಕರ್ ಖೇರಾದ ಸಂತ ನಗರ ಕಾಲೋನಿಯಲ್ಲಿ ನಡೆದಿದೆ. ಮಹಿಳೆಯರನ್ನು ಶೋಭಾ ಮತ್ತು ಆರತಿ ಎಂದು ಗುರುತಿಸಲಾಗಿದೆ. ಮಂಗಳವಾರ ರಾತ್ರಿ ನಾಯಿಮರಿಗಳು ಬೊಗಳುತ್ತಿದ್ದು, ಅದನ್ನು ಸಹಿಸಲಾಗದೇ ಇದ್ದ ಜಾಗದಿಂದ ಕಳುಹಿಸಿದ್ದಾರೆ. ಆನಂತರ ಪೆಟ್ರೋಲ್ ಸುರಿದು ಸಜೀವವಾಗಿ ಸುಟ್ಟಿದ್ದಾರೆ ಎನ್ನಲಾಗಿದೆ.
ಸ್ಥಳೀಯರು ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ವಿಷಯ ತಿಳಿದ ಅನಿಮಲ್ಸ್ ಕೇರ್ ಸೊಸೈಟಿಯ (Animal Care Society) ಕಾರ್ಯದರ್ಶಿ ಅಂಶುಮಾಲಿ ವಶಿಷ್ಠ ಪ್ರತಿಭಟನೆ ನಡೆಸಿದ್ದು, ನಂತರ ಆರೋಪಿಗಳ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ. ಈ ಕುರಿತು ಈಗ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.