women world cup : ಪಾಕಿಸ್ತಾನ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ
ಮೌಂಟ್ ಮಾಂಗನೊಯಿ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡದ ವಿರುದ್ಧ ಭಾರತದ ವನೀತೆಯರು ಭರ್ಜರಿ ಜಯ ಸಾಧಿಸಿದ್ದಾರೆ.
ಮಹಿಳಾ ವಿಶ್ವಕಪ್ ನ ಬಹು ನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ಪಂದ್ಯದಲ್ಲಿ ಪಾಕಿಸ್ತಾನ್ ವಿರುದ್ಧ ಟೀಂ ಇಂಡಿಯಾ ಬರೋಬ್ಬರಿ 107 ರನ್ ಗಳ ಗೆಲುವು ದಾಖಲಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪರ ಸ್ಮೃತಿ ಮಂದಾನ 50 ರನ್, ದೀಪ್ತಿ ಶರ್ಮಾ 40, ಸ್ನೇಹ್ ರಾಣಾ 53 ರನ್, ಪೂಜಾ ವಸ್ತ್ರಕರ್ 67 ರನ್ ಗಳಿಸಿದರು. ಇದರೊಂದಿಗೆ ನಿಗದಿತ 50 ಓವರ್ ಗಳಲ್ಲಿ ಟೀಂ ಇಂಡಿಯಾ ಏಳು ವಿಕೆಟ್ ನಷ್ಟಕ್ಕೆ 244 ರನ್ ಗಳಿಸಿತ್ತು.
245ರನ್ ಗುರಿ ಬೆನ್ನತ್ತಿದ್ದ ಪಾಕಿಸ್ತಾನ ತಂಡ 43 ಓವರ್ ಗಳಿಗೆ 137 ರನ್ ಗಳಿಗೆ ಆಲೌಟ್ ಆಗಿದೆ. ಪಾಕಿಸ್ತಾನದ ಪರ ಸಿದ್ರಾ ಅಮೀನ್ 30 ರನ್, ದಿಯಾನ ಬೇಗ್ 24 ರನ್ ಗಳಿಸಿದ್ದು ಬಿಟ್ಟರೇ ಮತ್ಯಾರು ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲೇ ಇಲ್ಲ. ಭಾರತದ ಬೌಲರ್ ಗಳ ದಾಳಿಗೆ ತತ್ತರಿಸಿದ ಪಾಕಿಸ್ತಾನ್ 137 ರನ್ ಗಳಿಗೆ ಮಂಡಿಯೂರಿದೆ.
ಭಾರತ ತಂಡದ ಪರ ರಾಜೇಶ್ವರಿ ಗಾಯಕ್ವಾಡ್ ನಾಲ್ಕು ವಿಕೆಟ್ ಪಡೆದು ಮಿಂಚಿದರು. ಇನ್ನುಳಿದಂತೆ ಗೋಸ್ವಾಮಿ, ಸ್ನೇಹ್ ರಾಣಾ 2 ತಲಾ ಎರಡು ವಿಕೆಟ್ ಪಡೆದರು. ಮೇಘನ ಸಿಂಗ್, ದೀಪ್ತಿ ಶರ್ಮಾ ತಲಾ 1 ವಿಕೆಟ್ ಪಡೆದರು.
ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಪೂಜಾ ವಸ್ತ್ರಕರ್ ಅವರಿಗೆ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಲಭಿಸಿತು. women-world-cup-India’s 107-run win over Pakistan









