ಮಹಿಳೆಯರ ಬಟ್ಟೆ ಅತ್ಯಾಚಾರಕ್ಕೆ ಪ್ರಚೋದನೆ ನೀಡುತ್ತದೆ: ರೇಣುಕಾಚಾರ್ಯ Saaksha Tv
ನವದೆಹಲಿ: ಮಹಿಳೆಯರ ಬಟ್ಟೆ ಅತ್ಯಾಚಾರಕ್ಕೆ ಪ್ರಚೋದನೆ ನೀಡುತ್ತದೆ ಎಂದು ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು ಪ್ರಿಯಾಂಕಾ ಗಾಂಧಿ ಕೀಳು ಮಟ್ಟದ ಹೇಳಿಕೆ ನೀಡಿದ್ದಾರೆ. ಪ್ರಿಯಾಂಕಾ ಗಾಂಧಿ ದೇಶದ ಕ್ಷಮೆ ಕೇಳಬೇಕು. ಮಹಿಳೆಯರ ಬಟ್ಟೆ ನೋಡಿ ಪುರುಷರು ಉದ್ವೇಗಕ್ಕೆ ಒಳಗಾಗುತ್ತಾರೆ. ಮಹಿಳೆಯರ ಬಟ್ಟೆ ಅತ್ಯಾಚಾರಕ್ಕೆ ಪ್ರಚೋದನೆ ನೀಡುತ್ತದೆ ಎಂದು ಮಹಿಳೆಯರು ಬಿಕಿನಿ ಹಾಕವುದು ಅವರ ಮೂಲಭೂತ ಹಕ್ಕು ಎಂಬ ಪ್ರಿಯಾಂಕಾ ಗಾಂಧಿ ಟ್ವೀಟ್ಗೆ ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದರು
ಅಲ್ಲದೇ ಪ್ರಿಯಾಂಕಾ ಗಾಂಧಿ ತಾಯಿ ಹೇಳಿ ಕೇಳಿ ಇಟಲಿಯವರು. ಅವರು ಯಾರನ್ನು ಮದುವೆಯಾಗಿದ್ದಾರೆ ಎನ್ನುವುದು ವೈಯಕ್ತಿಕ. ಮಹಿಳೆಯರ ಬಟ್ಟೆಯಿಂದ ಕೆಲವರು ಉದ್ವೇಗಗೊಳ್ಳುತ್ತಾರೆ. ಹಿಜಾಬ್ ವಿವಾದದ ಹಿಂದೆ ಎಸ್ಡಿಪಿಐ, ಪಿಎಫ್ಐ ಕೈವಾಡವಿದೆ. ಕಾಂಗ್ರೆಸ್ ಕೇವಲ ಓಟ್ ಬ್ಯಾಂಕ್ ರಾಜಕೀಯಕ್ಕಾಗಿ ಅಲ್ಪಸಂಖ್ಯಾತರನ್ನು ಬಳಕೆ ಮಾಡುತ್ತಿದೆ ಎಂದು ಹೇಳಿದರು.
ಪ್ರತಿಯೊಬ್ಬರು ಭಾರತ ಮಾತೆ ಮಕ್ಕಳು. ಹೀಗಾಗಿ ನಾವೆಲ್ಲಾ ಒಂದೇ ತಾಯಿಯ ಮಕ್ಕಳು. ಎಲ್ಲಾ ಅಲ್ಪ ಸಂಖ್ಯಾತರು ಕೆಟ್ಟವರಲ್ಲ. ರಾಜಕಾರಣದಲ್ಲಿ ನಾವು ಕೇಸರೀಕರಣ ಮಾಡುತ್ತೇವೆ. ಆದರೆ ಶಿಕ್ಷಣದಲ್ಲಿ ನಾವು ಕೇಸರೀಕರಣ ಮಾಡಲ್ಲ ಎಂದು ಎಂ ಪಿ ರೇಣುಕಾಚಾರ್ಯ ತಿಳಿಸಿದರು.