Womens T20 Wc ಪಾಕ್ ವಿರುದ್ಧದ ಕದನಕ್ಕೆ ಸ್ಮತಿ ಮಂಧಾನ ಡೌಟ್..!!
ಭಾರತ ಕ್ರಿಕೆಟ್ ತಂಡದ ಉಪನಾಯಕಿ ಸ್ಮತಿ ಮಂಧಾನ ಮಹಿಳಾ ಟಿ20 ವಿಶ್ವಕಪ್ನ ಮೊದಲ ಪಂದ್ಯದಲ್ಲಿ ಆಡುವುದು ಅನುಮಾನದಿಂದ ಕೂಡಿದೆ.
ಬೆರಳು ನೋವಿನಿಂದ ಬಳಲುತ್ತಿರುವ ತಾರಾ ಆಟಗಾರ್ತಿ ಸ್ಮತಿ ಮಂಧಾನ ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯಕ್ಕೆ ಅಲಭ್ಯರಾಗುತ್ತಿರುವುದು ತಂಡಕ್ಕೆ ಹಿನ್ನಡೆಯಾಗಿದೆ.
ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಉಪನಾಯಕಿ ಎಡಗೈ ಬೆರಳಿಗೆ ಗಾಯಮಾಡಿಕೊಂಡಿದ್ದರು.
ವಿಶ್ವಕಪ್ನಿಂಡ ಸ್ಮತಿ ಹೊರ ನಡೆದಿದ್ದಾರೆ ಎಂದು ಹೇಳುವುದಿಲ್ಲ ಆದರೆ ಪಾಕ್ ವಿರುದ್ಧ ಆಡುವುದು ಅನುಮಾನದಿಂದ ಕೂಡಿದೆ ಎಂದು ಐಸಿಸಿ ಮೂಲಗಳು ತಿಳಿಸಿವೆ. ನಾಯಕಿ ಹರ್ಮನ್ಪ್ರೀತ್ ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿರುವುದು ತಂಡವನ್ನು ಚಿಂತೆಗೀಡು ಮಾಡಿದೆ.
ಫೆ.12ರಂದು ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಆಡುವ ಮೂಲಕ ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದೆ.
Womens T20 Wc , smrithi mandana participation is doubt







