ಆಸ್ಟ್ರೇಲಿಯಾ (Australia) ವಿರುದ್ಧ ನಡೆಯಲಿರುವ ಏಕದಿನ ಸರಣಿಗಾಗಿ (ODI) ಬಿಸಿಸಿಐ (BCCI) ಭಾರತೀಯ ಮಹಿಳಾ ಆಟಗಾರ್ತಿಯರ ತಂಡವನ್ನು ಪ್ರಕಟಿಸಿದೆ.
ಆದರೆ, ಈ ಬಾರಿ ಬಿಸಿಸಿಐ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ (Shafali Verma) ಹಾಗೂ ಶ್ರೇಯಾಂಕಾ ಪಾಟೀಲ್ (Shreyanka Patil) ರನ್ನು ಕೈ ಬಿಟ್ಟಿದೆ. ಈ ಟೂರ್ನಿ ಡಿ. 5 ರಿಂದ 11 ರ ವರೆಗೆ ನಡೆಯಲಿದೆ. ಭಾರತ (India) ಹಾಗೂ ಆಸ್ಟ್ರೇಲಿಯಾ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ.
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಎಕ್ಸ್ ಖಾತೆಯಲ್ಲಿ ಭಾರತೀಯ ಆಟಗಾರರ ಪಟ್ಟಿ ಪ್ರಕಟಿಸಿದೆ. ಇತ್ತೀಚೆಗಷ್ಟೇ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ಸರಣಿ ಗೆಲುವು ಸಾಧಿಸಿತ್ತು. ಈ ಗೆಲುವಿನ ಭಾಗವಾಗಿದ್ದ ಐವರು ಆಟಗಾರರನ್ನು ಮುಂಬರುವ ಪಂದ್ಯಗಳಿಗೆ ಬಿಸಿಸಿಐ ಆಯ್ಕೆ ಮಾಡಿಲ್ಲ. ಆದರೆ ಹರ್ಲೀನ್ ಡಿಯೋಲ್, ಪ್ರಿಯಾ ಪುನಿಯಾ ಮತ್ತು ವಿಕೆಟ್ ಕೀಪರ್-ಬ್ಯಾಟರ್ ರಿಚಾ ಘೋಷ್ ಗೆ ಅವಕಾಶ ನೀಡಲಾಗಿದೆ.
ಭಾರತ ತಂಡದಲ್ಲಿ ಹರ್ಮನ್ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಪ್ರಿಯಾ ಪುನಿಯಾ, ಜೆಮಿಮಾ ರೋಡ್ರಿಗಸ್, ಹರ್ಲೀನ್ ಡಿಯೋಲ್, ಯಾಸ್ತಿಕಾ ಭಾಟಿಯಾ (ವಿಕೇಟ್ ಕೀಪರ್), ರಿಚಾ ಘೋಷ್ (ವಿಕೆಟ್ ಕೀಪರ್), ತೇಜಲ್ ಹಸಬ್ನಿಸ್, ದೀಪ್ತಿ ಶರ್ಮಾ, ಮಿನ್ನು ಮಣಿ , ಪ್ರಿಯಾ ಮಿಶ್ರಾ, ರಾಧಾ ಯಾದವ್, ಟಿಟಾಸ್ ಸಾಧು, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್ ಠಾಕೂರ್, ಸೈಮಾ ಠಾಕೂರ್ ಸ್ಥಾನ ಪಡೆದಿದ್ದಾರೆ.