Womens WC 2022 | ವಿಶ್ವಕಪ್ ನಲ್ಲಿ ಮಿಥಾಲಿ ರಾಜ್ ಅಪರೂಪದ ದಾಖಲೆ
2022ರ ವಿಶ್ವಕಪ್ ನಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಮತ್ತೊಂದು ಅಪರೂಪದ ದಾಖಲೆ ಬರೆದಿದ್ದಾರೆ.
ಮಹಿಳೆಯರ ODI ವಿಶ್ವಕಪ್‌ನ ಅಂಗವಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಮಹತ್ವದ ಪಂದ್ಯದಲ್ಲಿ ಮಿಥಾಲಿ ರಾಜ್ ಅರ್ಧಶತಕ (84 ಎಸೆತಗಳಲ್ಲಿ 68 ರನ್) ಸಿಡಿಸಿದ್ದಾರೆ.
ಕಾಕತಾಳೀಯವೆಂಬಂತೆ, 2000ನೇ ಇಸವಿಯಲ್ಲಿ ಇದೇ ತಂಡದ ವಿರುದ್ಧ ಮಿಥಾಲಿ ರಾಜ್ ಅರ್ಧಶತಕ ಸಿಡಿಸಿದ್ದರು. ಆ ಮೂಲಕ ವಿಶ್ವಕಪ್ ನಲ್ಲಿ ಅತಿ ಸಣ್ಣವಯಸ್ಸಿನಲ್ಲಿ ಅರ್ಧಶತಕ ಸಿಡಿಸಿದ ಸಾಧನೆ ಮಾಡಿದ್ದರು.
ಇದೀಗ ಇಂದಿನ ಪಂದ್ಯದಲ್ಲಿ ಮಿಥಾಲಿ ರಾಜ್ ಅದೇ ತಂಡದ ವಿರುದ್ಧ ಅರ್ಧಶತಕ ಸಿಡಿಸಿದ್ದಾರೆ. ಆ ಮೂಲಕ ವಿಶ್ವಕಪ್ ಪಂದ್ಯಾವಳಿಗಳಲ್ಲಿ ಅರ್ಧಶತಕ ಸಿಡಿಸಿದ ಭಾರತದ ಕಿರಿಯ ಮತ್ತು ಹಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.
ಇನ್ನು ಮ್ಯಾಚ್ ವಿಚಾರಕ್ಕೆ ಬಂದರೇ ದಕ್ಷಿಣಾಫ್ರಿಕಾ ವಿರುದ್ಧದ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲುಂಡಿದೆ. ಆ ಮೂಲಕ ಟೂರ್ನಿಯಿಂದ ಹೊರಬಿದ್ದಿದೆ. womens-wc-2022-mithali-raj-achieves-unique-record