ಕ್ಯಾನ್ಸರ್ ಸ್ಟ್ಯಾಟಿಸ್ಟಿಕ್ಸ್ ನಲ್ಲಿ ದೆಹಲಿ, ಮುಂಬೈ ಹಿಂದಿಟ್ಟ ಬೆಂಗಳೂರು..!
ಇಂದು ವರ್ಲ್ಡ್ ಕ್ಯಾನ್ಸರ್ ಡೇ.. ಇದೇ ದಿನ ಬೆಂಗಳೂರಿಗರಿನ ಕ್ಯಾನ್ಸರ್ ಸ್ಟ್ಯಾಟಿಸ್ಟಿಕ್ಸ್ ಸಿಲಿಕಾನ್ ಸಿಟಿ ಮಂದಿಗೆ ಶಾಕ್ ಕೊಟ್ಟಿದೆ.. ದೆಹಲಿ, ಮುಂಬೈಯನ್ನು ಬೆಂಗಳೂರು ಹಿಂದಿಕ್ಕಿದೆ ಅಂತ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ಮಾಹಿತಿ ಹೊರಹಾಕಿದೆ… ಹೌದು ಏಮ್ಸ್ ಹಾಗೂ ಐಸಿಎಮ್ ಆರ್, ಕ್ಯಾನ್ಸರ್ ಇನ್ಸ್ಟಿಟ್ಯೂಟ್ ಹೊರ ಹಾಕಿರುವ ಅಂಕಿ ಅಂಶಗಳು ಬೆಚ್ಚಿ ಬೀಳಿಸಿದೆ. 2020ರಲ್ಲಿ ಕ್ಯಾನ್ಸರ್ ಗೆ ಸಂಬಂಧಿಸಿದ ಅಂಕಿ ಅಂಶ ಹೊರ ಬಿದ್ದಿದೆ.. ಅದ್ರಲ್ಲೂ ಮಹಿಳೆಯರಲ್ಲಿ ಕ್ಯಾನ್ಸರ್ ಹೆಚ್ಚಾಗಿ ಕಂಡು ಬರುತ್ತಿದೆ.. ಬ್ರಸ್ಟ್ ಕ್ಯಾನ್ಸರ್ ಗೆ ಹೆಚ್ಚು ಮಹಿಳೆಯರು ತುತ್ತಾಗುತ್ತಿದ್ದಾರೆ.. ಬ್ಲಡ್ ಕ್ಯಾನ್ಸರ್, ಬ್ರೈನ್ ಟ್ಯೂಮರ್, ತುಂಬಾಕು ಸಂಬಂಧಿಸಿದ ಕ್ಯಾನ್ಸರ್ ಪ್ರಕರಣ ದಿನೇ ದಿನೇ ಹೆಚ್ಚುತ್ತಿದೆ..
ಭಾರತೀಯ ಕ್ರಿಕೆಟಿಗರನ್ನ ನಾಯಿಗೆ ಹೋಲಿಸಿದ ಕಂಗನಾ..!
ಇನ್ನೂ ಒಟ್ಟು ಕ್ಯಾನ್ಸರ್ ಪ್ರಕರಣಗಳನ್ನ ನೋಡೋದಾದ್ರೆ 2.5 ಮಿಲಿಯನ್ ಕೇಸ್ ಗಳಿವೆ. ಪ್ರತಿ ವರ್ಷ ಹೊಸ ಪ್ರಕರಣ 7 ಲಕ್ಷ ದಾಖಲಾಗ್ತಾರೆ ಎಂದು ಅಂಕಿ ಅಂಶಗಳು ತಿಳಿಸಿವೆ. ಕ್ಯಾನ್ಸರ್ ನಿಂದ ಸತ್ತವರ ಸಂಖ್ಯೆ – 5,56,400 ಇದೆ. ಈ ಪೈಕಿ ಮಹಿಳೆಯರು – 1,95,300, ಪುರುಷರು – 2,00,100. 30-60 ವರ್ಷ ವಯಸ್ಸಿನವರೇ ಹೆಚ್ಚು ಅನ್ನೋದು ಮತ್ತಷ್ಟು ಆತಂಕಕಾರಿ ವಿಚಾರವಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








