ಜಗತ್ತಿನ ಮೊದಲ ಕೊವಿಡ್-19 ಲಸಿಕೆ ರೆಡಿ
ಮಾಸ್ಕೋ, ಜುಲೈ 13: ಕೊವಿಡ್-19 ಲಸಿಕೆಯನ್ನು ನಾವು ಲಸಿಕೆ ಸಂಶೋಧನೆ ಮಾಡಿದ್ದು, ಅದರ ಕ್ಲಿನಿಕಲ್ ಪ್ರಯೋಗದ ಎಲ್ಲ ಹಂತಗಳೂ ಪೂರ್ಣಗೊಂಡಿವೆ ಎಂದು ರಷ್ಯಾ ತಿಳಿಸಿದೆ.
ರಷ್ಯಾದ ಗಮಾಲಿ ಇನ್ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಆಯಂಡ್ ಮೈಕ್ರೋಬಯಾಲಜಿ ತಯಾರಿಸಿದ ಜಗತ್ತಿನ ಮೊದಲ ಕೊವಿಡ್-19 ಲಸಿಕೆ ಇದಾಗಿದೆ.
ಮಾಸ್ಕೋದ ಮೊದಲ ವೈದ್ಯಕೀಯ ವಿಶ್ವವಿದ್ಯಾಲಯವಾದ ಸೆಚೆನೊವ್ ಯೂನಿವರ್ಸಿಟಿ ಈ ಲಸಿಕೆಯ ಮೇಲೆ ಮೇಲೆ ಜೂನ್ 18ರಂದು ಪ್ರಯೋಗಗಳನ್ನು ಪ್ರಾರಂಭಿಸಿತು. ಇನ್ಸ್ಟಿಟ್ಯೂಟ್ ಫಾರ್ ಟ್ರಾನ್ಸ್ಲೇಶನ್ ಮೆಡಿಕಲ್ ಆಯಂಡ್ ಬಯೋಟೆಕ್ನಾಲಜಿಯ ನಿರ್ದೇಶಕ ವಾದಿಮ್ ತಾರಾಸೊವ್ ಅವರು ಕೋವಿಡ್ ಲಸಿಕೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಸೆಚೆನೊವ್ ಯೂನಿವರ್ಸಿಟಿಯ ಸ್ವಯಂಸೇವಕರ ಮೇಲೆ ಲಸಿಕೆ ಪ್ರಯೋಗ ನಡೆಸಿದ್ದು, ಅದು ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ. ಜುಲೈ 15 ರಂದು ಒಂದು ಗುಂಪು ಬಿಡುಗಡೆಯಾಗುತ್ತಿದ್ದರೆ, ಇನ್ನೊಂದು ಗುಂಪನ್ನು ಜುಲೈ 20ರಂದು ಡಿಸ್ಚಾರ್ಜ್ ಮಾಡುತ್ತೇವೆ ಎಂದು ವಾದಿಮ್ ತಿಳಿಸಿದ್ದಾರೆ.
ಈ ಲಸಿಕೆ ಮಾನವನ ದೇಹಕ್ಕೆ ಎಷ್ಟು ಸುರಕ್ಷಿತ ಎಂಬುದನ್ನು ಪರೀಕ್ಷೆ ಮಾಡಲಾಗಿದ್ದು, ಲಸಿಕೆಯ ಪ್ರಯೋಗವು ಯಶಸ್ವಿಯಾಗಿದೆ. ಅಲ್ಲದೇ ಲಸಿಕೆಯಿಂದ ಯಾವುದೇ ಸಮಸ್ಯೆಗಳಿಲ್ಲ ಎಂಬುದು ಖಚಿತವಾಗಿದೆ ಎಂದು ಯೂನಿವರ್ಸಿಟಿ ತಿಳಿಸಿದೆ.
ಜಗತ್ತಿನಾದ್ಯಂತ ಈಗಾಗಲೇ ಸುಮಾರು 100ಕ್ಕೂ ಹೆಚ್ಚು ಲಸಿಕೆಗಳು ಕ್ಲಿನಿಕಲ್ ಪ್ರಯೋಗದ ಹಂತದಲ್ಲಿವೆ.








