ಭಾರತ ಸೇರಿ ವಿಶ್ವಾದ್ಯಂತ ಮದುವೆ ಸಮಯದಲ್ಲಿ ನಾನಾ ವಿಚಿತ್ರ ಆಚರಣೆಗಳು , ಸಂಪತ್ರದಾಯ , ರೀತಿ , ರಿವಾಜುಗಳು , ಆಚರಣೆಗಳು , ನಂಬಿಕೆಗಳಿವೆ.. ಆದ್ರೆ ನಾವು ಈಗ ಹೇಳೋಕೆ ಹೊರಟಿರುವ ಕೆಲ ಆಚರಣೆಗಳ ಬಗ್ಗೆ ತಿಳಿದರೆ ,, ಭಾರತದಲ್ಲಿ ಹುಟ್ಟಿದ್ದಕ್ಕೆ ಮತ್ತೊಮ್ಮೆ ದೇವರಿಗೆ ಥ್ಯಾಂಕ್ಸ್ ಹೇಳ್ತೀರಾ..!!
ವಿಶ್ವದ ಅತ್ಯಂತ ವಿಚಿತ್ರ ಸಂಪ್ರದಾಯಗಳು ಅದ್ರಲ್ಲೂ ಮದುವೆಯ ಸಂದರ್ಭದಲ್ಲಿ ಪಾಲಿಸುವಂತಹ ರಿವಾಜುಗಳ ಬಗ್ಗೆ ತಿಳಿಯಿರಿ..
ಭಾಗ -2
ಮದುವೆಗೆ ಮುಂಚೆ 1 ತಿಂಗಳು ಹುಡುಗಿ ಕಣ್ಣೀರಿಡುವ ಕಾನೂನು..!!
ಮದುವೆ 1 ತಿಂಗಳು ಮುಂಚೆ ಅಂದ್ರೆ 30 ದಿನಗಳ ಮುಂಚೆಯಿಂದಲೇ ಮದುವೆಯಾಗುವ ಹುಡುಗಿ ಪ್ರತಿ ದಿನ ಸುಮಾರು 1 ಗಂಟೆಗಳ ಕಾಲ ಅಳಬೇಕಾಗುತ್ತದೆ.. ಕಣ್ಣೀರಿಡಬೇಕಾಗುತ್ತದೆ.. ಈ ಕಾನೂನು ಬೇರೆಲ್ಲೂ ಅಲ್ಲ ಚೀನಾ ದೇಶದಲ್ಲಿದೆ..
ಏನೇ ಆದ್ರೂ ಈ ನಿಯಮವನ್ನ ಹುಡುಗೀರು ಪಾಲಿಸಲೇಬೇಕಾಗುತ್ತದೆ.. ಅಷ್ಟೇ ಅಲ್ದೇ ಹುಡುಗಿ ಅಳದೇ ಇದ್ದರೆ ಆಕೆಯನ್ನ ಸಮಾಜದಿಂದ ದೂರ ಇಡಲಾಗ್ತದೆ ಎನ್ನಲಾಗುತ್ತದೆ..
ಆಕೆಯೊಂದಿಗಿ ಪರಿವಾರದವರೂ ಅಳುವುದುಂಟು.. ಇದಕ್ಕೆ ಕಾರಣ – ಭವಿಷ್ಯದಲ್ಲಿ ಮುಂದೆ ಹುಡುಗಿಗೆ ಯಾವುತ್ತೂ ಅಳುವ ಅವಶ್ಯಕತೆಯೇ ಬೀಳಬಾರದೆಂದು ಹೇಳಲಾಗ್ತದೆ..
ವಧುವಿನ ಕಿಡ್ನಾಪ್..!!
ಮದುವೆಗೂ ಮುನ್ನ ವಧುವನ್ನ ಅಪಹರಿಸುವಂತಹ ಪದ್ದತಿ ರೋಮಾನಿಯಾ ದೇಶದಲ್ಲಿದೆ..
ಈ ರೀತಿ ವಧುವನ್ನ ಕಿಡ್ನಾಪ್ ಮಾಡಿದ ನಂತರ ಆಕೆಯನ್ನ ಮದುವೆ ಮಾಡಿಕೊಳ್ಬೇಕಿರುವ ಹುಡುಗನ ಬಳಿ ಯಾವುದಾದರೂ ವಿಚಾರ / ವಸ್ತುವಿಗೆ ಬೇಡಿಕೆ ಇಡಲಾಗುತ್ತದೆ.. ನಂತರ ಹುಡುಗ ಆಕೆಯನ್ನ ಕರೆ ತರಲು ಹೋದಾಗ ಆಕೆಯ ಕಿಡ್ನಾಪ್ ಮಾಡಿದ ಸ್ನೇಹಿತರು ಹೇಳಿದ್ದನ್ನ ಮಾಡಬೇಕಾಗುತ್ತದೆ.. ಇದರಿಂದ ಆಕೆಯ ಭಾವಿ ಪತಿ ಆಕೆಯನ್ನ ೆಷ್ಟು ಪ್ರೀತಿಸುತ್ತಾನೆ ಅಳೆಬಹುದು ಎಂಬ ಕಾರಣವಿದೆ..
ಮದುವೆ ನಂತರ 3 ದಿನಗಳ ಕಾಲ ಶೌಚಾಲಯ ಬಳಕೆ ಬಂದ್..!!
ವಿಚಿತ್ರ ದೇಶ ಚೀನಾದಲ್ಲೇ ಮತ್ತೊಂದು ಸಂಪ್ರದಾಯವಿದೆ.. ಮದುವೆ ನಂತರ ಹುಡುಗುತ ತನ್ನ ಪತ್ನಿ ಜೊತೆಗೆ ಮೂರು ದಿನಗಳ ವರೆಗೂ ಶೌಚಾಲಯ ಬಳಕೆ ಮಾಡುವಂತಿಲ್ಲ..
ಹಾಗೊಂದು ವೇಳೆ ಮಾಡಿದ್ರೆ ಅವರ ದಾಂಪತ್ಯ ಹೆಚ್ಚು ದಿನ ಉಳಿಯುವುದಿಲ್ಲ ಎಂಬ ನಂಬಿಕೆಯಿದೆ..
ಮದ್ಯ ಸೇವನೆ
ಫ್ರಾನ್ಸ್ ನಲ್ಲಿ ಮದುವೆ ದಿನ ವರ ಮದ್ಯ ಸೇವಿಸಬೇಕಾಗುತ್ತದೆ.. ಹೀಗೆ ಮದ್ಯ ಸೇವಿಸದೇ ಇರುವ ವರನ ಮೇಲೆ ಕೆಟ್ಟ ದೃಷ್ಟಿಯಿದೆ ಎಂದು ಹೇಳಲಾಗುತ್ತದೆ.
World’s Most Weird Traditions , saakshatv