WPL : ಈ ಸಲ ಕಪ್ ನಮ್ದಲ್ಲ… ಪ್ಲೇ ಆಫ್ ನಿಂದ RCB ಔಟ್..
ಗ್ರೇಸ್ ಹ್ಯಾರಿಸ್ ಅವರ ಸೋಟಕ ಬ್ಯಾಟಿಂಗ್ ನೆರವಿನಿಂದ ಯುಪಿ ವಾರಿಯರ್ಸ್ ಗುಜರಾತ್ ಜೈಂಟ್ಸ್ ವಿರುದ್ಧ ರೋಚಕ ಗೆಲುವು ದಾಖಲಿಸಿದೆ. ಇದರೊಂದಿಗೆ ಪ್ಲೇ ಆಫ್ ಪ್ರವೇಶಿಸಿದೆ. ಆರ್ಸಿಬಿ ಟೂರ್ನಿಯಿಂದ ಹೊರ ಬಿದ್ದಿದೆ.
ಈಗಾಗಲೇ ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಪ್ಲೇ ಆಫ್ ಪ್ರವೇಶಿಸಿದ್ದವು.ಇದೀಗ ಯುಪಿ ವಾರಿಯರ್ಸ್ ಮೂರನೆ ತಂಡವಾಗಿ ಪ್ರವೇಶಿಸಿದೆ. ಆರ್ಸಿಬಿ ಹಾಗು ಗುಜರಾತ್ ಜೈಂಟ್ಸ್ ಪ್ಲೇ ಆಫ್ಗೆ ಹೋಗುವಲ್ಲಿ ವಿಫಲವಾಗಿದೆ.
ಬ್ರೇಬೋರ್ನ್ ಮೈದಾನದಲ್ಲಿ ನಡೆದ ಟಿ20 ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಜೈಂಟ್ಸ್ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿತು. ಯುಪಿ ವಾರಿಯರ್ಸ್ 19.5 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಜೈಂಟ್ಸ್ ತಂಡಕ್ಕೆ ಆರಂಭಿಕರಾದ ಸೋಫಿಯಾ ಡಂಕ್ಲಿ (23ರನ್), ಲಾರಾ ವೋಲ್ವಡ್ರ್ತ್ (17ರನ್)ಮೊದಲ ವಿಕೆಟ್ಗೆ 41 ರನ್ ಸೇರಿಸಿದರು. ಹರ್ಲಿನ್ ಡಿಯೊಲ್ (4ರನ್)ಬೇಗನೆ ಪೆವಿಲಿಯನ್ ಸೇರಿದರು.
50ರನ್ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಡಿ.ಹೇಮಲತಾ ಹಾಗೂ ಆಶ್ಲೆ ಗಾರ್ಡನರ್ 93 ರನ್ಗಳ ಜೊತೆಯಾಟ ನೀಡಿದರು. ಬಿರುಸಿನ ಬ್ಯಾಟಿಂಗ್ ಮಾಡಿದ ಹೇಮಲತಾ 30 ಎಸೆತದಲ್ಲಿ ಅರ್ಧ ಶತಕ ಸಿಡಿಸಿದರು. ಗರ್ಡನರ್ 35 ಎಸೆತದಲ್ಲಿ ಅರ್ಧ ಶತಕ ಸಿಡಿಸಿದರು. ಹೇಮಾಲತಾ 57, ಆಶ್ಲೆ ಗಾರ್ಡನರ್ 60 ರನ್ ಹೊಡೆದು ಪಾರ್ಶವಿ ಚೋಪ್ರಾಗೆ ವಿಕೆಟ್ ಒಪ್ಪಿಸಿದರು.
ಸುಶ್ಮಾ 8, ಅಶ್ವಿನಿ 5, ಲಕಿಮ್ ಗಾರ್ತ್ ಅಜೇಯ 1 ರನ್ ಗಳಿಸಿದರು. ಗುಜರಾತ್ ಪರ ರಾಜೇಶ್ವರಿ ಗಾಯಕ್ವಾಡ್ 39ಕ್ಕೆ 2, ಪಾರ್ಶವಿ 29ಕ್ಕೆ 2 ವಿಕೆಟ್ ಪಡೆದರು.
179 ರನ್ ಗುರಿ ಬೆನ್ನತ್ತಿದ ಯುಪಿ ವಾರಿಯರ್ಸ್ ಆರಂಭಿಕರಾದ ದೇವಿಕಾ ವೈದ್ಯ(7 ರನ್), ಅಲಿಸ್ಸಾ ಹೀಲಿ (12 ರನ್) ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಕಿರಣ್ ನಾವ್ಗಿರೆ (4ರನ್) ಗಳಿಸಿದರು.
ನಾಲ್ಕನೆ ವಿಕೆಟ್ಗೆ ಜತೆಗೂಡಿದ ತಾಹೀಲಾ ಮೆಕ್ಗ್ರೆತ್ ಹಾಗೂ ಗ್ರೇಸ್ ಹ್ಯಾರಿಸ್ 768 ರನ್ಗಳ ಜೊತೆಯಾಟ ನೀಡಿ ಪಂದ್ಯಕ್ಕೆ ತಿರುವು ನೀಡಿದರು.
ತಾಹೀಲಾ ಮೆಕ್ಗ್ರೆತ್ 34 ಎಸೆತದಲ್ಲಿ ಅರ್ಧ ಶತಕ ಸಿಡಿಸಿದರು. ತಾಹೀಲಾ ಮೆಕ್ಗ್ರೆತ್ (46 ಎಸೆತ, 11 ಬೌಂಡರಿ) 57 ರನ್ ಗಳಿಸಿ ಗಾರ್ಡನರ್ಗೆ ವಿಕೆಟ್ ಒಪ್ಪಿಸಿದರು. ದೀಪ್ತಿ ಶರ್ಮಾ 6 ರನ್, ಗ್ರೇಸ್ ಹ್ಯಾರಿಸ್ 32 ಎಸೆತದಲ್ಲಿ ಅರ್ಧ ಶತಕ ಸಿಡಿಸಿದರು. ಒಟ್ಟು 61 ಎಸೆತದಲ್ಲಿ 7 ಬೌಂಡರಿ, 4 ಸಿಕ್ಸರ್ ಸಿಡಿಸಿ 72 ರನ್ ಹೊಡೆದರು. ಕೊನೆಯಲ್ಲಿ ಏಕಾಂಗಿ ಹೋರಾಟ ಮಾಡಿದ ಸೋಫಿ ಎಕ್ಲಾಸ್ಟೊನ್ ಅಜೇಯ 19 ರನ್ ಹೊಡೆದು ಇನ್ನು ಒಂದು ಎಸೆತ ಬಾಕಿ ಇರುವಂತೆ ತಂಡವನ್ನು ಗೆಲುವಿನ ದಡ ಸೇರಿಸಿದರು.
ಗುಜರಾತ್ ಪರ ಕಿಮ್ ಗಾರ್ತ್ 2, ಮೋನಿಕಾ ಪಟೇಲ್, ಆಶ್ಲಕೆ ಗಾರ್ಡನರ್ 1, ತನುಜಾ ಕಾನ್ವಾರ್ ತಲಾ 1 ವಿಕೆಟ್ ಪಡೆದರು.
WPL : This time the cup is not ours… RCB out of play off..