Wriddhiman | ಟೀಂ ಇಂಡಿಯಾಗೆ ಆಯ್ಕೆಯಾಗದಿದ್ದಕ್ಕೆ ಸಹಾ ಬೇಸರ
2022ರಲ್ಲಿ ಗುಜರಾತ್ ಟೈಟಾನ್ಸ್ ತಂಡ ಐಪಿಎಲ್ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಟೀಂ ಇಂಡಿಯಾದ ಅನುಭವಿ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ, ಟೀಂ ಇಂಡಿಯಾಗೆ ಆಯ್ಕೆಯಾಗದಿದ್ದಕ್ಕೆ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.
ರಾಹುಲ್ ದ್ರಾವಿಡ್ ಮತ್ತು ಆಯ್ಕೆ ಸಮಿತಿಯ ಸದಸ್ಯರು ಟೀಂ ಇಂಡಿಯಾಗೆ ಮರುಪ್ರವೇಶ ಮಾಡುವುದು ಕಷ್ಟ ಎಂದು ಈಗಾಗಲೇ ಸಹಾಗೆ ಸ್ಪಷ್ಟಪಡಿಸಿದ್ದಾರೆ.
ಆದ್ರೂ ಐಪಿಎಲ್ ಪ್ರದರ್ಶನದ ಆಧಾರದ ಮೇಲೆ ನಾನು ಆಯ್ಕೆಯಾಗುತ್ತೇನೆ ಎಂಬ ಆಸೆಯೊಂದಿಗೆ ಇದ್ದೆ ಎಂದು ಸಹಾ ಬೇಸರ ಹೊರಹಾಕಿದ್ದಾರೆ.
ಕಳೆದ ಐಪಿಎಲ್ ಋತುವಿನಲ್ಲಿ ಪ್ರದರ್ಶನವನ್ನು ನೋಡಿದ್ರೆ ನಾನು ಈಗಾಗಲೇ ಟೀ ಇಂಡಿಯಾದಲ್ಲಿ ಇರಬೇಕಾಗುತ್ತು. ಯುವಕರ ಪೈಪೋಟಿ ಮತ್ತು ನೀಡಿದ ಅವಕಾಶಗಳಲ್ಲಿ ಮಿಂಚಿದ್ರೂ ನನಗೆ ಚಾನ್ಸ್ ಸಿಗಲಿಲ್ಲ ಅಂದ್ರೆ ಇನ್ಮುಂದೆ ನಾನು ಟೀಂ ಇಂಡಿಯಾಗೆ ವಾಪಸ್ ಆಗೋದು ಕಷ್ಟ ಎಂದು ಸಹಾ ಹೇಳಿದ್ದಾರೆ.
![Wriddhiman Saha makes HUGE revelation regarding his India comeback saaksah tv](http://saakshatv.com/wp-content/uploads/2022/05/saha-300x216.jpg)
ಭಾರತ ತಂಡದ ಮಾಜಿ ನಾಯಕ ಎಮ್ಮ್ಸ್ ಧೋನಿ ಟೆಸ್ಟ್‌ಗೆ ವಿದಾಯ ಹೇಳಿದ ನಂತರ ಭಾರತದ ಪ್ರಮುಖ ವಿಕೆಟ್ ಕೀಪರ್ ಆಗಿದ್ದ ಸಹಾ, ಕಳೆದ ವರ್ಷದ ಅಡಿಲೇಡ್ ಟೆಸ್ಟ್ ನಂತರ ಹಿನ್ನಡೆ ಅನುಭವಿಸಿದರು.
ಆಸ್ಟ್ರೇಲಿಯಾ ಸರಣಿಯಲ್ಲಿ, ರಿಷಬ್ ಪಂತ್ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾದ ಪ್ರಮುಖ ವಿಕೆಟ್ ಕೀಪರ್ ಆದರು. ಹೀಗಾಗಿ ಸಹಾ ಟೀಂ ಇಂಡಿಯಾದ ಎರಡನೇ ಆಯ್ಕೆಯ ವಿಕೆಟ್ ಕೀಪರ್ ಆದರು.
ಅಂದಹಾಗೆ ಐಪಿಎಲ್ 2022 ರ ಸೀಸನ್ ನಲ್ಲಿ ಕೊನೆಯ ನಿಮಿಷದಲ್ಲಿ ಗುಜರಾತ್ ಟೈಟಾನ್ಸ್‌ನ ಭಾಗವಾಗಿದ್ದ ಸಹಾ, ತನಗೆ ಸಿಕ್ಕ ಅವಕಾಶಗಳನ್ನು ಬಳಸಿಕೊಂಡರು.
11 ಪಂದ್ಯಗಳಲ್ಲಿ 31.70 ಸರಾಸರಿಯಲ್ಲಿ 3 ಅರ್ಧ ಶತಕಗಳ ಸಹಾಯದಿಂದ 317 ರನ್ ಗಳಿಸಿದರು.