Wriddhiman saha | ಸಹಾಗೆ “ವಿದಾಯ”ದ ಸಲಹೆ ಕೊಟ್ಟ ದ್ರಾವಿಡ್..!!
ಶ್ರೀಲಂಕಾ ವಿರುದ್ಧ ತವರಿನಲ್ಲಿ ನಡೆಯಲಿರುವ ಟೆಸ್ಟ್ ಸರಣಿಗೆ ಭಾರತೀಯ ತಂಡವನ್ನು ಬಿಸಿಸಿಐ ಶನಿವಾರ ಪ್ರಕಟಿಸಿದೆ. Wriddhiman-saha-slams-team-management saaksha tv
ಆದರೆ, ಟೀಂ ಇಂಡಿಯಾದ ಅನುಭವಿ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹಾ ಅವರನ್ನು ಬಿಸಿಸಿಐ ತಂಡದಿಂದ ಹೊರಗಿಟ್ಟಿದೆ.
ಈ ಹಿನ್ನೆಲೆಯಲ್ಲಿ ವೃದ್ಧಿಮಾನ್ ಸಾಹಾ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಬಗ್ಗೆ ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ.
ಅಲ್ಲದೆ ಟೀಂ ಇಂಡಿಯಾದ ಹೆಡ್ ಕೋಚ್ ರಾಹುಲ್ ದ್ರಾವಿಡ್, ನಿವೃತ್ತಿ ಬಗ್ಗೆ ಯೋಚಿಸುವಂತೆ ಸಲಹೆ ನೀಡಿರುವುದಾಗಿ ಸಹಾ ಹೇಳಿದ್ದಾರೆ.
ಶ್ರೀಲಂಕಾ ವಿರುದ್ಧದ ಟೆಸ್ಟ್ ಗೆ ಟೀಂ ಇಂಡಿಯಾ ಆಯ್ಕೆಯಲ್ಲಿ ನಿಮ್ಮನ್ನು ಪರಿಗಣಿಸಲಾಗುವುದಿಲ್ಲ ಎಂದು ಟೀಂ ಮ್ಯಾನೆಜ್ ಮೆಂಟ್ ಈ ಹಿಂದೆಯೇ ಹೇಳಿತ್ತಂತೆ.

ಇದೇ ಕಾರಣಕ್ಕಾಗಿ ಸಹಾ ರಣಜಿ ಟ್ರೋಫಿಯಿಂದ ಹೊರಗುಳಿದಿದ್ದಾರೆ ಎಂದು ಹೇಳಲಾಗುತ್ತಿದೆ.
ಅಲ್ಲದೆ ಕಳೆದ ನವೆಂಬರ್‌ನಲ್ಲಿ ಕಾನ್ಪುರದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ನಾನು ಅಜೇಯ 61 ರನ್ ಗಳಿಸಿದಾಗ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನನ್ನನ್ನು ಅಭಿನಂದಿಸಿದರು.
ಅಲ್ಲದೇ ನಾನು ಬಿಸಿಸಿಐ ಅಧ್ಯಕ್ಷರಾಗಿರುವವರೆಗೆ ತಂಡದಲ್ಲಿ ನಿನ್ನ ಸ್ಥಾನದ ಬಗ್ಗೆ ಚಿಂತಿಸಬೇಡ ಎಂದಿದ್ದರು.
ಗಂಗೂಲಿ ಅವರ ಭರವಸೆ ಕೇಳಿ ನನಗೆ ತುಂಬಾ ಸಂತೋಷವಾಗಿತ್ತು. ಆದರೆ ಈಗ ಏನಾಗಿದ್ವೋ ಗೊತ್ತಿಲ್ಲ.
ಈಗ ಶ್ರೀಲಂಕಾ ಸರಣಿಯಲ್ಲಿ ನನ್ನನ್ನು ಕಡೆಗಣಿಸಿದ್ದಾರೆ ಎಂದು ಸಹಾ ಬೇಸರ ಹೊರಹಾಕಿದ್ದಾರೆ.








