ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ -ಕೈಲ್ ಜಾಮಿನ್ಸನ್ ಮಾರಕ ದಾಳಿ.. ಟೀಮ್ ಇಂಡಿಯಾಗೆ ನ್ಯೂಜಿಲೆಂಡ್ ದಿಟ್ಟ ಸವಾಲು..!
ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯದ ಮೂರನೇ ದಿನದ ಗೌರವವನ್ನು ನ್ಯೂಜಿಲೆಂಡ್ ಪಡೆದುಕೊಂಡಿದೆ. ಮೂರನೇ ದಿನದ ಅಂತ್ಯಕ್ಕೆ ನ್ಯೂಜಿಲೆಂಡ್ ಎರಡು ವಿಕೆಟ್ ಕಳೆದುಕೊಂಡು 101 ರನ್ ದಾಖಲಿಸಿದೆ. ಕೇನ್ ವಿಲಿಯಮ್ಸನ್ ಅಜೇಯ 12 ರನ್ ಹಾಗೂ ರಾಸ್ ಟೇಲರ್ ಖಾತೆ ತೆರೆಯದೇ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ನ್ಯೂಜಿಲೆಂಡ್ ನ ಆರಂಭಿಕ ಆಟಗಾರ ಡೆವೊನ್ ಕಾನ್ವೆ ಆಕರ್ಷಕ 54 ರನ್ ಸಿಡಿಸಿದ್ರೆ, ಟಾಮ್ ಲಾಥಮ್ ತಾಳ್ಮೆಯ 30 ರನ್ ಗಳಿಸಿದ್ರು. ಭಾರತದ ಪರ ಇಶಾಂತ್ ಶರ್ಮಾ ಮತ್ತು ಆರ್. ಅಶ್ವಿನ್ ತಲಾ ಒಂದೊಂದು ವಿಕೆಟ್ ಉರುಳಿಸಿದ್ರು.
ಇದಕ್ಕು ಮೊದಲು ಬ್ಯಾಟಿಂಗ್ ಮಾಡಿದ್ದ ಟೀಮ್ ಇಂಡಯಾ ತನ್ನ ಮೊದಲ ಇನಿಂಗ್ಸ್ ಅನ್ನು 217 ರನ್ ಗೆ ಅಂತ್ಯಗೊಳಿಸಿತ್ತು. ನ್ಯೂಜಿಲೆಂಡ್ ತಂಡದ ಮಾರಕ ವೇಗಿ ಕೈಲ್ ಜಾಮಿನ್ಸನ್ ಟೀಮ್ ಇಂಡಿಯಾಗೆ ಶಾಕ್ ನೀಡಿದ್ರು. ಅಲ್ಲದೆ ಐದು ವಿಕೆಟ್ ಪಡೆದು ವಿರಾಟ್ ಪಡೆಯ ರನ್ ವೇಗಕ್ಕೆ ಕಡಿವಾಣ ಹಾಕಿದ್ರು. ಇನ್ನೊಂದು ಕಡೆ ಟ್ರೆಂಟ್ ಬೌಲ್ಟ್ ಮತ್ತು ನೇಲ್ ವಾಗ್ನರ್ ತಲಾ ಎರಡು ವಿಕೆಟ್ ಪಡೆದ್ರೆ, ಟೀಮ್ ಸೌಥಿ ಒಂದು ವಿಕೆಟ್ ಉರುಳಿಸಿದ್ರು.
ಟೀಮ್ ಇಂಡಿಯಾ ಪರ ರೋಹಿತ್ ಶರ್ಮಾ (43 ರನ್), ಶುಬ್ಮನ್ ಗಿಲ್ (28 ರನ್), ಚೇತೇಶ್ವರ ಪೂಜಾರ (8), ವಿರಾಟ್ ಕೊಹ್ಲಿ (44), ಅಜಿಂಕ್ಯಾ ರಹಾನೆ (49) ರಿಷಬ್ ಪಂತ್ (4), ರವೀಂದ್ರ ಜಡೇಜಾ (15), ಆರ್. ಅಶ್ವಿನ್ (22), ಇಶಾಂತ್ ಶರ್ಮಾ (4), ಜಸ್ಪ್ರಿತ್ ಬೂಮ್ರಾ (0), ಮುಹಮ್ಮದ್ ಶಮಿ ಅಜೇಯ 4 ರನ್ ದಾಖಲಿಸಿದ್ದರು.