ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ – ಮೊದಲ ದಿನದ ಆಟಕ್ಕೆ ಮಳೆ ಅಡ್ಡಿ..!
ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯದ ಮೊದಲ ದಿನವನ್ನು ಸಂಪೂರ್ಣವಾಗಿ ಮಳೆ ಆಹುತಿ ಪಡೆದುಕೊಂಡಿತ್ತು, ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಟಾಸ್ ನಡೆಸಲು ಸಾಧ್ಯವಾಗಿಲ್ಲ. ಹೀಗಾಗಿ ಪಂದ್ಯವನ್ನು ಎರಡನೇ ದಿನಕ್ಕೆ ಮುಂದೂಡಲಾಗಿತ್ತು.
ಇಂಗ್ಲೆಂಡ್ ನ ಸೌತಾಂಪ್ಟನ್ ನಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ಆಟಗಾರರು ಬಹಳ ಕಾತರದಿಂದ ಎದುರು ನೋಡುತ್ತಿದ್ದರು.
ಈ ನಡುವೆ, ಐತಿಹಾಸಿಕ ಟೆಸ್ಟ್ ವನ್ನು ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಮೊದಲ ದಿನವೇ ನಿರಾಸೆ ಅನುಭವಿಸಬೇಕಾಯ್ತು.
ಟೆಸ್ಟ್ ಕ್ರಿಕೆಟ್ ಚರಿತ್ರೆಯ ಈ ಐತಿಹಾಸಿಕ ಪಂದ್ಯಕ್ಕೆ ಮೈಕೆಲ್ ಗಫ್ ಮತ್ತು ರಿಚರ್ಡ್ ಐಲಿಂಗ್ ವರ್ತ್ ಅವರು ಅಂಪೈರ್ ಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಈಗಾಗಲೇ ಟೀಮ್ ಇಂಡಿಯಾದ 11ರ ಬಳಗವನ್ನು ಪ್ರಕಟಿಸಲಾಗಿದೆ. ವಿರಾಟ್ ಕೊಹ್ಲಿ, ರಹಾನೆ, ಪೂಜಾರ, ಪಂತ್, ರೋಹಿತ್ ಮತ್ತು ಶುಬ್ಮನ್ ಗಿಲ್ ತಂಡದ ಬ್ಯಾಟಿಂಗ್ ಸ್ತಂಭಗಳು. ಆಲ್ ರೌಂಡರ್ ಗಳಾದ ಆರ್. ಅಶ್ವಿನ್ ಮತ್ತು ರವೀಂದ್ರ ಜಡೇಜಾ ಸ್ಪಿನ್ ಮಾಂತ್ರಿಕರಾದ್ರೆ, ಜಸ್ಪ್ರಿತ್ ಬೂಮ್ರಾ, ಇಶಾಂತ್ ಮತ್ತು ಮಹಮ್ಮದ್ ಶಮಿ ಅವರು ವೇಗದ ಬೌಲಿಂಗ್ ಅಸ್ತ್ರಗಳಾಗಿದ್ದಾರೆ.
ಇನ್ನೊಂದೆಡೆ ನ್ಯೂಜಿಲೆಂಡ್ ಆಡುವ 11 ರ ಬಳಗವನ್ನು ಇನ್ನೂ ಪ್ರಕಟಿಸಿಲ್ಲ.
ಒಟ್ಟಿನಲ್ಲಿ ಫೈನಲ್ ಪಂದ್ಯದ ಎರಡನೇ ದಿನವಾದ್ರೂ ಆಟ ಶುರುವಾಗುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.