ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ – ಮಳೆ ನಿಂತ ಮೇಲೆ ಟೀಮ್ ಇಂಡಿಯಾದಲ್ಲಿ ಬದಲಾವಣೆ ಇಲ್ಲ..!
ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯದ ಮೊದಲ ದಿನ ಪೂರ್ತಿಯಾಗಿ ಮಳೆಗೆ ಆಹುತಿಯಾಗಿದೆ.
ಪಂದ್ಯದ ಎರಡನೇ ದಿನ ಎಷ್ಟು ಗಂಟೆಗೆ ಶುರುವಾಗುತ್ತೆ ಅನ್ನೋದನ್ನು ಅಂಪೈರ್ ಗಳು ನಿರ್ಧಾರ ಮಾಡುತ್ತಾರೆ. ಈ ನಡುವೆ ಫೈನಲ್ ಪಂದ್ಯ ಜೂನ್ 23ರಂದು ಹೆಚ್ಚುವರಿ ದಿನವಾಗಿ ಆಡುವುದು ಖಚಿತವಾಗಿದೆ.
ಸೌತಾಂಪ್ಟನ್ ನಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ನ್ಯೂಜಿಲೆಂಡ್ ಮತ್ತು ಟೀಮ್ ಇಂಡಿಯಾ ಆಟಗಾರರು ನಿರಾಸೆ ಅನುಭವಿಸಬೇಕಾಯ್ತು.
ಈ ನಡುವೆ ಟೀಮ್ ಇಂಡಿಯಾ ಪಂದ್ಯಕ್ಕಿಂತ ಮುನ್ನವೇ ಆಡುವ 11ರ ಬಳಗವನ್ನು ಆಯ್ಕೆ ಮಾಡಿತ್ತು. ಇಬ್ಬರು ಸ್ಪಿನ್ನರ್ ಗಳು ಮತ್ತು ಮೂವರು ವೇಗಿಗಳನ್ನು ಕಣಕ್ಕಿಳಿಸುವ ನಿರ್ಧಾರ ಮಾಡಿತ್ತು.
ರವೀಂದ್ರ ಜಡೇಜಾ ಮತ್ತು ಆರ್. ಅಶ್ವಿನ್ ಸ್ಪಿನ್ ಅಸ್ತ್ರಗಳಾದ್ರೆ, ಇಶಾಂತ್, ಬೂಮ್ರಾ ಮತ್ತು ಶಮಿ ವೇಗದ ಆಸ್ತ್ರಗಳಾಗಿದ್ದಾರೆ. ಇನ್ನು ಬ್ಯಾಟಿಂಗ್ ನಲ್ಲಿ ರೋಹಿತ್, ಗಿಲ್, ಚೇತೇಶ್ವರ ಪೂಜಾರ, ವಿರಾಟ್, ರಹಾನೆ ಮತ್ತು ರಿಷಬ್ ಪಂತ್ ತಂಡದ ಆಧಾರಸ್ತಂಭಗಳಾಗಿದ್ದಾರೆ.
ಏತನ್ಮಧ್ಯೆ, ಮಳೆಯಿಂದ ಪಿಚ್ ನ ವರ್ತನೆ ಕೂಡ ಬದಲಾವಣೆಯಾಗುವ ಸಾಧ್ಯತೆಗಳಿವೆ. ಹಾಗಂತ ಟೀಮ್ ಇಂಡಿಯಾದಲ್ಲಿ ಈಗ ಪ್ರಕಟಿಸಿರುವ ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಟೀಮ್ ಇಂಡಿಯಾದ ಫೀಲ್ಡಿಂಗ್ ಕೋಚ್ ರಾಮಕೃಷ್ಣನ್ ಶ್ರೀಧರ್ ಹೇಳಿದ್ದಾರೆ.
ನನ್ನ ಪ್ರಕಾರ ತಂಡದ 11ರ ಬಳಗದಲ್ಲಿ ಬದಲಾವಣೆ ಮಾಡುವ ಪ್ರಮೇಯವಿಲ್ಲ. ಈಗ ಪ್ರಕಟಿಸಿರುವ 11 ಆಟಗಾರರು ಯಾವುದೇ ವಾತಾರವರಣದಲ್ಲೂ ಅತ್ಯುತ್ತಮ ಪ್ರದರ್ಶನ ನೀಡುವ ಸಾಮಥ್ರ್ಯವನ್ನು ಹೊಂದಿದ್ದಾರೆ ಎಂದು ಅವರು ಹೇಳಿದ್ರು.
ಇನ್ನು ಆರಂಭಿಕ ಶುಬ್ಮನ್ ಗಿಲ್ ಅವರ ಆಯ್ಕೆಯನ್ನು ಕೂಡ ಶ್ರೀಧರ್ ಸಮರ್ಥನೆ ಮಾಡಿಕೊಂಡಿದ್ದಾರೆ. ಗಿಲ್ ಕಳೆದ ಇಂಗ್ಲೆಂಡ್ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿರಬಹುದು. ಆದ್ರೆ ಶುಬ್ಮನ್ ಅತ್ಯುತ್ತಮ ಆಟಗಾರ.. ಆತ ಮಾನಸಿಕವಾಗಿ ಗಟ್ಟಿಯಾಗಿದ್ದಾನೆ. ತಂಡದ ಗೇಮ್ ಪ್ಲಾನ್ ಮತ್ತು ತನ್ನ ಜವಾಬ್ದಾರಿ ಏನು ಎಂಬುದನ್ನು ಆತ ತಿಳಿದುಕೊಂಡಿದ್ದಾನೆ ಎಂದು ಶ್ರೀಧರ್ ಗಿಲ್ ಅವರ ಆಯ್ಕೆ ಸಮರ್ಥಿಸಿಕೊಂಡಿದ್ದಾರೆ.
ಇನ್ನು ನ್ಯೂಜಿಲೆಂಡ್ ತಂಡ ಅಂತಿಮ ಹನ್ನೊಂದರ ಬಳಗವನ್ನು ಆಯ್ಕೆ ಮಾಡಿಕೊಂಡಿದ್ರೂ ಇನ್ನೂ ಬಹಿರಂಗಪಡಿಸಿಲ್ಲ.
ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯದ ಎರಡನೇ ದಿನ ಪಂದ್ಯ ಶುರುವಾಗುವ ಸಾಧ್ಯತೆಗಳಿವೆ.