WTC ಟೈಟಲ್ ಟೀಂ ಇಂಡಿಯಾದೇ : ಸೆಹ್ವಾಗ್
ಟೀಂ ಇಂಡಿಯಾದ ಯುವ ಆಟಗಾರರಾದ ರಿಷಬ್ ಪಂತ್ ಮತ್ತು ಪೃಥ್ವಿ ಶಾ ಟೆಸ್ಟ್ ತಂಡದಲ್ಲಿದ್ದರೆ ಭಾರತವನ್ನು ಯಾರು ತಡೆಯಲಾರರು ಎಂದು ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.
ವಿಧ್ವಂಸಕ ಆಟವಾಡುವ ಈ ಇಬ್ಬರು ಟೀಂ ಇಂಡಿಯಾದಲ್ಲಿದ್ದರೇ ಟೆಸ್ಟ್ ಚಾಂಪಿಯನ್ ಶಿಪ್ ಟ್ರೋಪಿ ಗೆಲ್ಲುವುದು ಖಚಿತ ಎಂದರು.
“ಪೃಥ್ವಿ ಶಾ ಟೆಸ್ಟ್ ಕ್ರಿಕೆಟ್‌ನಲ್ಲಿ ನಿಜವಾದ ವಿನೋದವನ್ನು ನೀಡಬಲ್ಲರು. ಶಾ ಪಂತ್ ತಂಡದಲ್ಲಿದ್ದರೆ ಎದುರಾಳಿ ತಂಡ ಕನಿಷ್ಠ 400 ರನ್ ಗಳಿಸಬೇಕು.

ಇವರಿಬ್ಬರೂ ಅಂತಿಮ ತಂಡದಲ್ಲಿದ್ದರೆ ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟ್ ಅನ್ನು ಆಳಬಹುದು. ಆಗ ಖಂಡಿತವಾಗಿಯೂ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಗೆಲ್ಲುಬಹುದು ಎಂದಿದ್ದಾರೆ.
ಅಲ್ಲದೇ ರಿಷಬ್ ಪಂತ್ ಅವರನ್ನು ಆರಂಭಿಕರಾಗಿ ಕಣಕ್ಕಿಳಿಸಿದರೆ ಅವರು ಮತ್ತಷ್ಟು ಮಿಂಚಬಹುದು ಎಂದಿದ್ದಾರೆ.
ಅಂಡರ್ 19 ವಿಶ್ವಕಪ್ ನಲ್ಲಿ ರಿಷಬ್ ಪಂತ್ ಆರಂಭಿಕ ಆಟಗಾರನಾಗಿ ಕಣಕ್ಕಿಳಿದಿದ್ದರು. wtc-virender-sehwag-reaction-prithvi-shaw-pant








