yadagir : ದೋರನಹಳ್ಳಿ ಸಿಲಿಂಡರ್ ದುರಂತ ; ದೂರುದಾರರನ್ನೇ ಆರೋಪಿಯನ್ನಾಗಿ ಮಾಡಿದ ಪೊಲೀಸರು – ಗ್ರಾಮಸ್ಥರ ಆಕ್ರೋಶ..
ಯಾದಗಿರಿ ಜಿಲ್ಲೆಯ ದೋರನಹಳ್ಳಿ ಸಿಲಿಂಡರ್ ದುರಂತ ಪ್ರಕರಣದಲ್ಲಿ ಖಾಕಿ ಪಡೆಗಳು ಗ್ಯಾಸ್ ಏಜೆನ್ಸಿ ಪರ ನಿಂತಿದ್ದಾರ ಎಂಬ ಅನುಮಾನ ಹುಟ್ಟುಹಾಕಿದೆ. ಕಳೆದ ವರ್ಷ ಫೆಬ್ರವರಿ 25 ರಂದು ದೋರನಹಳ್ಳಿ ನಡೆದಿದ್ದ ಅನಿಲ ದುರಂತದಲ್ಲಿ 15 ಜನ ಸಾವನ್ನಪ್ಪಿದ್ದರು
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಸಿಲಿಂಡರ್ ಸ್ಪೋಟಗೊಂಡಿದ್ದ ಪ್ರಕರಣ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. ಪೊಲೀಸರು ಚಾರ್ಜಶೀಟ್ ನಲ್ಲಿ ದೂರುದಾರನನ್ನೇ ಆರೋಪಿಯನ್ನಾಗಿ ಮಾಡಿದ್ದಾರೆ.
ಸಾಹೇಬಗೌಡ ಅವರ ಮಕ್ಕಳಿಬ್ಬರ ಸೀಮಂತ ಕಾರ್ಯಕ್ರಮ ನಡೆಯುವ ವೇಳೆ ಸಿಲಿಂಡರ್ ಸ್ಪೋಟಗೊಂಡಿತ್ತು. ಈ ಕುರಿತು ಸಾಹೇಬಗೌಡ ಅವರಿಂದ ವಿಜಯ ಗ್ಯಾಸ್ ಏಜೆನ್ಸಿ ಮಾಲೀಕರಾದ ಹನಮಂತ್ರಾಯಗೌಡ, ಮ್ಯಾನೇಜರ್ ಅಣ್ಣವೀರಯ್ಯ ವಿರುದ್ಧ ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಗ್ಯಾಸ್ ಸಿಲಿಂಡರ್ ನೀಡುವಾಗ ಸಿಲಿಂಡರ್ ಪರಿಶೀಲಿಸಿ ಸೂಕ್ತವಾದುದನ್ನು ನೀಡಬೇಕಾಗಿತ್ತು. ದೋಷಪೂರಿತ ಹಳೇ ಗ್ಯಾಸ್ ಸಿಲಿಂಡರ್ ನೀಡಿ ನಿರ್ಲಕ್ಷ್ಯ ವಹಿಸಿದ್ದ ಗ್ಯಾಸ್ ಏಜೆನ್ಸಿ. ಇದರಿಂದ ಗ್ಯಾಸ್ ಸ್ಪೋಟಗೊಂಡು ಸಾವು-ನೋವು ಸಂಭವಿಸಿತ್ತು. ಹಾಗಾಗಿ ಇಂಡಿಯನ್ ಗ್ಯಾಸ್ ಡೀಲರಶೀಫ್ ನವರ ವಿರುದ್ಧ ಕ್ರಮಕೈಗೊಳ್ಳಲು ಸಾಹೇಬಗೌಡ ದೂರು ದಾಖಲಿಸಿದ್ದರು.
ಇದೀಗ ಚಾರ್ಜ್ ಶೀಟ್ ನಲ್ಲಿ ದೂರುದಾರನನ್ನೇ ಆರೋಪಿಯನ್ನಾಗಿ ಮಾಡಿದ್ದಾರೆ ಪೊಲೀಸರು. ಪೊಲೀಸರ ನಡೆಗೆ ಅನುಮಾನ ವ್ಯಕ್ತಪಡಿಸುತ್ತಿರುವ ಗ್ರಾಮಸ್ಥರು ಗ್ಯಾಸ್ ದುರಂತ ಪ್ರಕರಣ ನ್ಯಾಯಂಗ ತನಿಖೆಗೆ ವಹಿಸಲು ಆಗ್ರಹ ಮಾಡುತ್ತಿದ್ದಾರೆ. ಅನಿಲ ದುರಂತದಲ್ಲಿ ಕುಟುಂಬಸ್ಥರನ್ನು ಕಳೆದುಕೊಂಡು ನೊಂದಿರುವ ದೂರುದಾರ ಸಾಹೇಬಗೌಡರನ್ನ ಆರೋಪಿ ಮಾಡಿರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
yadagir : Doranahalli cylinder tragedy ; The police who made the complainant the accused – villagers’ outrage..








