ಯಾದಗಿರಿ. ಕೋವಿಡ್ ಸೋಂಕಿನ ವರದಿ ಬರುವ ಮೊದಲೇ ಮೃತ ವ್ಯಕ್ತಿಯನ್ನೂ ಬೇಕಾಬಿಟ್ಟಿಯಾಗಿ ಅಂತ್ಯಕ್ರಿಯೆ ಮಾಡಿ ಪ್ರೋಟೋಕಾಲ್ ಉಲ್ಲಂಘನೆ ಮಾಡಿರುವ ಮತ್ತೊಂದು ಪ್ರಕರಣ ಯಾದಗಿರಿಯಲ್ಲಿ ನಡೆದಿದೆ.
ಉಸಿರಾಟದ ಸಮಸ್ಯೆದಿಂದ ಬಳಲುತ್ತಿದ್ದ ಯಾದಗಿರಿ ತಾಲೂಕಿನ ಹೊನಗೇರಾ ಗ್ರಾಮದ ವ್ಯಕ್ತಿ ರಾಯಚೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಆದರೆ, ಮೃತನ ಗಂಟಲು ದ್ರವದ ಮಾದರಿ ವರದಿ ಬರುವ ಮುನ್ನವೇ ರಸ್ತೆ ಬದಿ ಗುಂಡಿ ತೆಗೆದು ಬೇಕಾಬಿಟ್ಟಿಯಾಗಿ ಅಂತ್ಯಸAಸ್ಕಾರ ಮಾಡಲಾಗಿದೆ.

ರಾಯಚೂರು ಜಿಲ್ಲಾಡಳಿತ ಮೃತನ ಸ್ವಾಬ್ ಸ್ಯಾಂಪಲ್ ಪಡೆದಿತ್ತು. ಜಿಲ್ಲಾಡಳಿತದಿಂದ ಅಧಿಕೃತ ಸ್ಯಾಂಪಲ್ ವರದಿನ್ನೂ ಬಂದಿರಲಿಲ್ಲ. ಹೀಗಾಗಿ ಕೊರೊನಾ ಸೋಂಕಿನಿAದ ಮೃತಪಟ್ಟಿದ್ದಾರೆನ್ನುವುದೂ ದೃಢಪಟ್ಟಿಲ್ಲ. ಇವರನ್ನೂ ಕೊರನಾ ರೋಗಿಗಳಂತೆಯೇ ಹೊನಗೇರಾ ಗ್ರಾಮದ ಮೃತ ವ್ಯಕ್ತಿಯ ಜಮೀನಿನಲ್ಲಿ ಅಂತ್ಯಕ್ರಿಯೆ ಮಾಡಲಾಗಿದೆ. ಮೃತ ದೇಹವನ್ನು ನೆಲದ ಮೇಲೆ ಎಳೆದುಕೊಂಡು ಬಂದು ಗುಂಡಿಯಲ್ಲಿ ಎಸೆಯಲಾಗಿದೆ.
ಕೊರೊನಾದಿಂದ ಮೃತಪಟ್ಟವರ ಅಂತ್ಯಕ್ರಿಯೆ ವೇಳೆ ಪ್ರೋಟೋಕಾಲ್‌ನ್ನು ಕಡ್ಡಾಯವಾಗಿ ಪಾಲಿಸುವಂತೆ ರಾಜ್ಯ ಸರ್ಕಾರ, ಅದರಲ್ಲೂ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕಟ್ಟುನಿಟ್ಟಿನ ಸೂಚನೆ ನೀಡಿದ್ದರೂ ಮತ್ತೆ ಅದೇ ರೀತಿ ಪುನರಾವರ್ತನೆಯಾಗಿದೆ.
ಕಳೆದ ವಾರವೂ ಕೂಡ ಯಾದಗಿರಿಯಲ್ಲಿ ಇದೇ ರೀತಿ ಕೊರೊನಾದಿಂದ ಮೃತಪಟ್ಟವರ ಅಂತ್ಯಕ್ರಿಯೆ ಮಾಡಲಾಗಿತ್ತು. ಬಳ್ಳಾರಿಯಲ್ಲಿ ಬೇಕಾಬಿಟ್ಟಿಯಾಗಿ ಅಂತ್ಯಕ್ರಿಯೆ ಮಾಡಿದ್ದ ಘಟನೆ ರಾಜ್ಯವನ್ನು ತಲೆ ತಗ್ಗಿಸುವಂತೆ ಮಾಡಿದೆ. ಇಷ್ಟಾದರೂ ಜಿಲ್ಲಾಡಳಿತಗಳು ಕ್ರಮ ಕೈಗೊಂಡಿಲ್ಲ ಎಂಬುದಕ್ಕೆ ಈ ಘಟನೆಗಳೇ ಸಾಕ್ಷಿಯಾಗಿವೆ.








