Yadagiri | ವಾರ್ಡನ್ ಅಮಾನತಿಗೆ ಆಗ್ರಹಿಸಿ ವಿದ್ಯಾರ್ಥಿನಿಯರ ಪ್ರತಿಭಟನೆ
ಯಾದಗಿರಿ : ವಾರ್ಡನ್ ಅಮಾನತಿಗೆ ಆಗ್ರಹಿಸಿ ಯಾದಗಿರಿಯ ವಿವೇಕಾನಂದ ಎಸ್ ಸಿ, ಎಸ್ ಟಿ ವಸತಿ ನಿಲಯದ ವಿದ್ಯಾರ್ಥೀನಿಯರು ಪ್ರತಿಭಟನೆ ನಡೆಸಿದ್ದಾರೆ.
ವಸತಿ ನಿಲಯದಲ್ಲಿ ಸರಿಯಾಗಿ ಊಟ ನೀಡದೆ ಹಾಗೂ ಆರೋಗ್ಯದ ಕಾಳಜಿ ತೊರದಕ್ಕೆ ವಿದ್ಯಾರ್ಥಿನಿಯರು ಆಕ್ರೋಶ ಹೊರಹಾಕಿದ್ದು, ಕೂಡಲೇ ವಾರ್ಡನ್ ಶಾಂತಾ ಅವರನ್ನು ಅಮಾನತು ಮಾಡಬೇಕು ಎಂದು ಪ್ರತಿಭಟಿಸಿದ್ದಾರೆ.

ಬೆಳಿಗ್ಗೆ ಡಿಸಿ ಕಚೇರಿ ಮುಂದೆ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದರು. ಇಷ್ಟಾದರೂ ಅಧಿಕಾರಿಗಳು ವಸತಿ ನಿಲಯಕ್ಕೆ ಭೇಟಿ ನೀಡದೇ ನಿರ್ಲಕ್ಷ್ಯ ವಹಿಸಿದ್ದರು.
ಇದರಿಂದ ಬೇಸತ್ತ ವಿದ್ಯಾರ್ಥಿನಿಯರು ಮತ್ತೆ ಪ್ರತಿಭಟನೆಗೆ ಇಳಿದ್ರು, ವಿಷಯ ತಿಳಿದು ಸ್ಥಳಕ್ಕೆ ಸಿಇಓ ಸ್ಥಳಕ್ಕೆ ಭೇಟಿ ನೀಡಿದರು.
ಈ ವೇಳೆ ಜಿಲ್ಲಾ ಪಂಚಾಯಿತಿ ಸಿಇಓ ಅವರಿಗೆ ವಿದ್ಯಾರ್ಥಿನಿಯರು ತರಾಟೆ ತೆಗೆದುಕೊಂಡರು.








