ಮಹಿಳೆ ಹಾಗೂ ವ್ಯಾಪಾರಿಗಳಿಗೆ ಕಿರುಕುಳ ನೀಡುವವರ ವಿರುದ್ಧ ಕಿಡಿಕಾರಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅವರನ್ನು ಯಮರಾಜನೇ ಕರೆಯುತ್ತಾನೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸಮಾಜವಾದಿ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ
ಗೋರಖ್ಪುರದಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್, ಹಿಂದಿನ ಸರ್ಕಾರದ ಕಾಲದಲ್ಲಿ ಮಾಫಿಯಾ ಮತ್ತು ಗೂಂಡಾಗಳು ಮಹಿಳೆ ಹಾಗೂ ವ್ಯಾಪಾರಿಗಳಿಗೆ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ.
ಆ ಕಾಲದಲ್ಲಿ ಜನರ ಸುಲಿಗೆ, ಭಯೋತ್ಪಾದನೆ ಸಾಮಾನ್ಯವಾಗಿತ್ತು. ಆದರೆ ಈಗ ನಾವು (BJP) ಮಾಫಿಯಾವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿದ್ದೇವೆ. ಇಂದಿನ ಉತ್ತರ ಪ್ರದೇಶ ಸುರಕ್ಷಿತ ಮತ್ತು ಸುಸ್ಥಿರ ಆಡಳಿತ ಹೊಂದಿದೆ ಎಂದು ಹೇಳಿದರು.
ಒಂದು ಜಿಲ್ಲೆ, ಒಂದು ವೈದ್ಯಕೀಯ ಕಾಲೇಜು ಯೋಜನೆ
ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಪ್ರಸ್ತಾಪಿಸಿ, ನಾವು ‘ಒಂದು ಜಿಲ್ಲೆ, ಒಂದು ವೈದ್ಯಕೀಯ ಕಾಲೇಜು’ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದೇವೆ. ಕಳೆದ 10 ವರ್ಷಗಳಲ್ಲಿ ಭಾರತದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ ಎಂದು ಯೋಗಿ ಆದಿತ್ಯನಾಥ್ ಅಭಿಪ್ರಾಯಪಟ್ಟರು.
ಈ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ, ವಿಶೇಷವಾಗಿ ಸಮಾಜವಾದಿ ಪಕ್ಷದ ವಿರುದ್ಧದ ವಾಗ್ದಾಳಿ ಮುಂದಿನ ಚುನಾವಣೆಗೂ ಪ್ರಭಾವ ಬೀರುವ ಸಾಧ್ಯತೆ ಇದೆ.