ಸಾಮಾಜಿಕ ಜಾಲತಾಣದಲ್ಲಿಯೇ ನನಗೆ ವಿಶ್ ಮಾಡಿ : ಯಶ್ ಮನವಿ
ಬೆಂಗಳೂರು : ಇದೇ ಜನವರಿ 8 ರಂದು ತಮ್ಮ ಜನ್ಮದಿನದ ಹಿನ್ನೆಲೆ ರಾಕಿಂಗ್ ಸ್ಟಾರ್ ಯಶ್ ಯಾರು ಕೂಡು ಮನೆಯ ಬಳಿ ಬರಬೇಡಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ಇನ್ ಸ್ಟಾಗ್ರಾಂ ನಲ್ಲಿ ಈ ಕುರಿತು ವಿಡಿಯೋ ಹಂಚಿಕೊಂಡಿರುವ ಯಶ್, ನನ್ನ ಹುಟ್ಟುಹಬ್ಬದ ದಿನದಂದು ಯಾರೂ ಕೂಡ ಮನೆ ಬಳಿ ಬಾರದೆ ಸಾಮಾಜಿಕ ಜಾಲತಾಣದಲ್ಲಿಯೇ ನನಗೆ ವಿಶ್ ಮಾಡಿ.
ನೀವು ಅನವಶ್ಯಕವಾಗಿ ಎಲ್ಲರೂ ಒಟ್ಟಿಗೆ ಸೇರುವುದರಿಂದ ಯಾರಿಗಾದ್ರು ತೊಂದರೆ ಆದ್ರೆ ನನಗೆ ತುಂಬಾ ನೋವಾಗುತ್ತದೆ.
ಪ್ರತಿ ವರ್ಷ ನನ್ನ ಹುಟ್ಟುಹಬ್ಬದ ದಿನದಂದು ನಿಮಗಿಂತ ಹೆಚ್ಚು ಖುಷಿಯಲ್ಲಿ ಇರ್ತೀನಿ. ಯಾಕಂದ್ರೆ ನಿಮ್ಮನ್ನೆಲ್ಲಾ ಹತ್ತಿರದಿಂದ ನೋಡಬಹುದು ಎಂದು.
ಆದ್ರೆ ಈ ವರ್ಷ ಕೊರೊನಾ ಇರುವುದರಿಂದ ನೀವು ಎಲ್ಲೆಲ್ಲಿ ಇರ್ತಿರೋ ಅಲ್ಲಿಂದಲೇ ಶುಭಾಶಯ ತಿಳಿಸಿ ಅಂತ ಮನವಿ ಮಾಡಿಕೊಂಡಿದ್ದಾರೆ.
ಇದೇ ವೇಳೆ ಮತ್ತೊಂದು ಮಾಹಿತಿ ನೀಡಿದ ಯಶ್, ಜನವರಿ 8ರ 10 ಗಂಟೆ 18 ನಿಮಿಷಕ್ಕೆ ಹೊಂಬಾಳೆ ಯೂಟ್ಯೂಬ್ ನಲ್ಲಿ ಕೆಜಿಎಫ್-2 ಟೀಸರ್ ರಿಲೀಸ್ ಆಗುತ್ತಿದೆ.
ಅದನ್ನು ನೋಡಿ ಎಂಜಾಯ್ ಮಾಡಿ ಆಶೀರ್ವದಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









