Yash Dull | ಚರಿತ್ರೆ ಸೃಷ್ಟಿಸಿದ ಯಶ್ ಧೂಳ್
ಅಂಡರ್-19 ವಿಶ್ವಕಪ್ ಹೀರೋ ಯಶ್ ಧೂಳ್, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಚೊಚ್ಚಲ ರಣಜಿ ಪಂದ್ಯದ ಎರಡು ಇನ್ನಿಂಗ್ಸ್ ಗಳಲ್ಲಿ ಯಶ್ ಶತಕ ಸಿಡಿಸಿದ್ದಾರೆ. yash-dull- ranji-trophy-history-achieve-incredible-feat saaksha tv
ರಣಜಿ ಟ್ರೋಫಿಯ ಮೊದಲ ಪಂದ್ಯದಲ್ಲಿ ದೆಹಲಿ ಮತ್ತು ತಮಿಳುನಾಡು ಮುಖಾಮುಖಿಯಾಗಿದ್ದವು.
ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು. ಆದರೆ, ಮೊದಲ ಇನ್ನಿಂಗ್ಸ್ ನಲ್ಲಿ ಶತಕ ಸಿಡಿಸಿದ್ದ ಯಶ್ ಧುಲ್ ಎರಡನೇ ಇನ್ನಿಂಗ್ಸ್ ನಲ್ಲೂ ಶತಕ ಸಿಡಿಸಿ ಮಿಂಚಿದ್ದಾರೆ.
ಇದರೊಂದಿಗೆ ರಣಜಿ ಟ್ರೋಫಿ ಚೊಚ್ಚಲ ಪಂದ್ಯದ ಎರಡೂ ಇನ್ನಿಂಗ್ಸ್ ಗಳಲ್ಲಿ ಶತಕ ಸಿಡಿಸಿದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ಯಶ್ ಧೂಳ್ ಬಾಜನರಾಗಿದ್ದಾರೆ.
ಇದಕ್ಕೂ ಮೊದಲು, ಗುಜರಾತ್ ಬ್ಯಾಟ್ಸ್‌ಮನ್ ನಾರಿ ಕಾಂಟ್ರಾಕ್ಟರ್ ಈ ಸಾಧನೆ ಮಾಡಿದ್ದರು. ಮಹಾರಾಷ್ಟ್ರದ ಬ್ಯಾಟ್ಸ್‌ಮನ್ ವಿರಾಗ್ ಎರಡನೇ ಸ್ಥಾನದಲ್ಲಿದ್ದರು.
ನಾರಿ ಕಂಟ್ರಾಕ್ಟರ್ 1952-53 ರ ರಣಜಿ ಟ್ರೋಫಿಯಲ್ಲಿ ಈ ಸಾಧನೆಯನ್ನು ಮಾಡಿದ್ದರೇ ವಿರಾಗ್ ಅವಟೆ 2012-13 ರ ಋತುವಿನಲ್ಲಿ ಈ ಸಾಧನೆಯನ್ನು ದಾಖಲಿಸಿದ್ದಾರೆ.
ಇನ್ನು ಯಶ್ ಧೂಳ್ ಮೊದಲ ಇನಿಂಗ್ಸ್ ನಲ್ಲಿ 113 ರನ್ ಗಳಿಸಿದ್ದು ಎರಡನೇ ಇನಿಂಗ್ಸ್ ನಲ್ಲೂ 113 ರನ್ ಗಳಿಸಿದ್ದಾರೆ.
ಐಪಿಎಲ್ ಮೆಗಾ ಹರಾಜು-2022 ರ ಅಂಗವಾಗಿ ದೆಹಲಿ ಫ್ರಾಂಚೈಸ್ 50 ಲಕ್ಷಕ್ಕೆ ಯಶ್ ಧುಲ್ ಅವರನ್ನು ಖರೀದಿಸಿದೆ.