ರಣಬೀರ್ ನಟನೆಯ ಶಂಶೇರಾ ಚಿತ್ರದ ಫಸ್ಟ್ ಲುಕ್ ಔಟ್…
ಬಾಲಿವುಡ್ ನಟ ರಣಬೀರ್ ಕಪೂರ್ ಅಭಿನಯದ ಬಹು ನಿರೀಕ್ಷಿತ ಚಿತ್ರ “ಶಂಶೇರಾ” ಚಿತ್ರದ ಫಸ್ಟ್ ಲುಕ್ ಅನ್ನು ಸೋಮವಾರ ಯಶ್ ರಾಜ್ ಫಿಲ್ಮ್ಸ್ (YRF) ಅಧಿಕೃತವಾಗಿ ಬಿಡುಗಡೆ ಮಾಡಿದೆ. ಇದಕ್ಕೂ ಮೊದಲು ಚಿತ್ರದ ಪೋಸ್ಟರ್ ಲೀಕ್ ಆಗಿತ್ತು.
ಕರಣ್ ಮಲ್ಹೋತ್ರಾ ನಿರ್ದೇಶಿಸುತ್ತಿರುವ ಈ ಚಿತ್ರವು 1800 ರ ದಶಕದ ಕಾಲಘಟ್ಟವನ್ನ ಹೊಂದಿದೆ. ಬ್ರಿಟಿಷರಿಂದ ತಮ್ಮ ಹಕ್ಕು ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡುವ ಡಕಾಯಿಟ್ ಬುಡಕಟ್ಟು ಜನಾಂಗದ ಕಥೆಯನ್ನ ಚಿತ್ರದಲ್ಲಿ ತೋರಿಸಲಾಗಿದೆ.
Introducing Shamshera – the fierce warrior & the saviour of his tribe. Experience it in @IMAX in Hindi, Tamil & Telugu. Celebrate #Shamshera with #YRF50 only at a theatre near you on 22nd July. pic.twitter.com/QUzDQVckPv
— Yash Raj Films (@yrf) June 20, 2022
YRF ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡ ಪೋಸ್ಟರ್‌ನಲ್ಲಿ, ರಣಬೀರ್ ಉಗ್ರ ಯೋಧನಾಗಿ, ಉದ್ದನೆಯ ಗಡ್ಡವನ್ನು ಬಿಟ್ಟು ರಫ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೊದಲೇ ಆನ್‌ಲೈನ್‌ನಲ್ಲಿ ಚಿತ್ರದ ಪೋಸ್ಟರ್ ಸೋರಿಕೆಯಾದ ಕೆಲವು ದಿನಗಳ ನಂತರ ಅಫಿಶಿಯಲ್ಲಾಗಿ ಬಿಡುಗಡೆ ಮಾಡಲಾಗಿದೆ.
ಶಂಶೇರಾ ಚಿತ್ರದಲ್ಲಿ ವಾಣಿ ಕಪೂರ್ ಮತ್ತು ಸಂಜಯ್ ದತ್ ಸಹ ಅಭಿನಯಿಸಿದ್ದು, ಚಿತ್ರವು ಜುಲೈ 22 ರಂದು ಥಿಯೇಟರ್‌ಗಳಲ್ಲಿ ರಿಲೀಸ್ ಆಗಲಿದೆ. ಹಿಂದಿ, ಜೊತೆಗೆ ತಮಿಳು ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಲಿದೆ. ರಣಬೀರ್ ಕೊನೆಯದಾಗಿ 2018 ರಲ್ಲಿ ಬಿಡುಗಡೆಯಾದ ಸಂಜು ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.