ಭಾರೀ ನಿರೀಕ್ಷೆ ಮೂಡಿಸಿರುವ ರಾಮಾಯಣ ಸಿನಿಮಾದ ಬಗ್ಗೆ ಹೊಸ ಅಪ್‌ಡೇಟ್ ಹೊರಬಿದ್ದಿದೆ. ಯಶ್ ಮತ್ತು ರಣಬೀರ್ ಕಪೂರ್ ನಟನೆಯ ಈ ಸಿನಿಮಾದ ಟೀಸರ್ ಇದೇ ಏಪ್ರಿಲ್ 2ರಂದು, ಹನುಮಾನ್ ಜಯಂತಿ ಪ್ರಯುಕ್ತ ಬಿಡುಗಡೆಯಾಗಲಿದೆ.
ಈ ಟೀಸರ್‌ನಲ್ಲಿ ವಿಶೇಷವಾಗಿ ರಾಮನ ಪಾತ್ರದ ಒಂದು ತುಣುಕನ್ನು ತೋರಿಸಲಾಗುತ್ತದೆ ಎಂದು ನಿರ್ಮಾಪಕ ನಮಿತ್ ಮಲ್ಲೋತ್ರಾ ಘೋಷಿಸಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಮಹತ್ವಾಕಾಂಕ್ಷಿ ಚಿತ್ರದ ಬಗ್ಗೆ ಈಗಾಗಲೇ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿದೆ.
ಈ ಚಿತ್ರವನ್ನು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ (ಯಶ್ ಒಡೆತನ) ಹಾಗೂ ಪ್ರೈಮ್ ಫೋಕಸ್ ಒಟ್ಟಾಗಿ ನಿರ್ಮಿಸುತ್ತಿವೆ. ಭಾರತೀಯ ಸಿನೆಮಾದಲ್ಲೇ ದೊಡ್ಡ ಮಟ್ಟದ ಪೌರಾಣಿಕ ಚಿತ್ರವಾಗಿ ಮೂಡಿ ಬರಲಿರುವ ‘ರಾಮಾಯಣ’ ಚಿತ್ರ, ಬಿಡುಗಡೆಯ ಮುನ್ನವೇ ಸದ್ದು ಮಾಡುತ್ತಿದೆ.








