ಇಡೀ ಭಾರತ ಚಿತ್ರರಂಗವೇ ಕಾತರದಿಂದ ಎದುರು ನೋಡುತ್ತಿರುವ ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ “ಕೆಜಿಎಫ್ 2” ಶೂಟಿಂಗ್ ಬಿರುಸಿನಿಂದ ನಡೆಯುತ್ತಿದೆ. ಈಗಾಗಲೇ ಶೂಟಿಂಗ್ ಅಖಾಡಕ್ಕೆ ‘ರಾಕಿ ಬಾಯ್’ (Yash) ಇಳಿದಾಗಿದೆ. ‘ಅಧೀರ’ನ ಚಿತ್ರೀಕರಣಕ್ಕೆ ಸಂಜು ಬಾಬ ರೆಡಿಯಾಗ್ತಾಯಿದ್ದಾರೆ. ಸದ್ಯ ಚಿತ್ರೀಕರಣ ಕೊನೆಯ ಹಂತ ತಲುಪಿದೆ. 
ಇತ್ತೀಚಿಗೆ ಉಡುಪಿಯ ಕಡಲತೀರದಲ್ಲಿ ಚಿತ್ರೀಕರಣ ಮಾಡಿ ಮುಗಿಸಿದ್ದ ಸಿನಿಮಾತಂಡ ಈಗ ಹೈದರಾಬಾದ್ ಗೆ ಪಯಣ ಬೆಳೆಸಿದೆ.
ರಾಕಿ ಭಾಯ್ ಯಶ್ ಲಾಕ್ ಡೌನ್ ಬಳಿಕ ಮೊದಲ ಬಾರಿಗೆ ಉಡುಪಿಯ ಕಡಲತೀರದಲ್ಲಿ ನಡೆದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ : ಮಿಸ್ಟರ್ ಇಂಡಿಯಾ ಜಿಮ್ ರವಿಗೆ ಒಲಿದ ಮದರ್ ತೆರೇಸಾ ರಾಷ್ಟ್ರೀಯ ಪ್ರಶಸ್ತಿ
ಇದೀಗ ಹೈದರಾಬಾದ್ ಚಿತ್ರೀಕರಣದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಯಶ್ ಹೈದರಾಬಾದ್ ಗೆ ಎಂಟ್ರಿ ಕೊಟ್ಟಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.
ಹೈದರಾಬಾದ್ ಏರ್ ಪೋರ್ಟ್ ನಲ್ಲಿ ಕ್ಯಾಮರಾ ಕಣ್ಣಿಗೆ ಸೆರೆಯಾಗಿರುವ ಯಶ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.
ಇನ್ನೂ ಈ ಹಿಂದೆಯೇ ಪ್ರಶಾಂತ್ ನೀಲ್ ಅವರು ತಿಳಿದ್ದಂತೆ ಹೈದ್ರಾಬಾನ್ ನಲ್ಲಿ ಚಿತ್ರೀಕರಣ ನಡೆಯುತ್ತಿದೆ.

ಪ್ರಶಾಂತ್ ನೀಲ್ ಅವರ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ದೊಡ್ಡ ದೊಡ್ಡ ಸ್ಟಾರ್ ನಟರ ದಂಡೇ ಇದ್ದು, ಯಾವಾಗ ತೆರೆಮೇಲೆ ಬರಲಿದೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಮತ್ತೊಂದೆಡೆ ಮೂಲಗಳ ಪ್ರಕಾರ ಮಕರ ಸಂಕ್ರಾಂತಿ ವೇಳೆ ಚಿತ್ರ ತೆರೆಗಪ್ಪಳಿಸಲಿದೆ ಎಂದು ಹೇಳಲಾಗ್ತಾಯಿದೆ.
ಹೂಗಿಡದ ಉಡುಗೆಯಲ್ಲಿ ಅದಾ : ಅದಾ ಲುಕ್ ಗೆ ಅಭಿಮಾನಿಗಳು ಫಿದಾ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








