ಬ್ಯೂಟಿ ನಯನತಾರ ಅವರು ಯಶ್ (Yash) ನಟಿಸಿ, ನಿರ್ಮಿಸುತ್ತಿರುವ `ಟಾಕ್ಸಿಕ್’ (Toxic) ತಂಡ ಸೇರಿಕೊಂಡಿದ್ದಾರೆ.
ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು, ನಯನತಾರಾ ಕೂಡ ತಂಡ ಸೇರಿದ್ದಾರೆ ಎನ್ನಲಾಗಿದೆ. ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ `ಆಲ್ ಯು ನೀಡ್ ಕಾನ್ಫಿಡೆನ್ಸ್ ಆ್ಯಂಡ್ ಬೂಟ್ಸ್’ ಎಂಬ ಸಂದೇಶ ಬರೆದು ಶೂಟಿಂಗ್‌ನಲ್ಲಿ ಕುಳಿತಿರುವಂತೆ ಕಾಲಿನ ಫೋಟೋವನ್ನು ನಟಿ ಪೋಸ್ಟ್ ಮಾಡಿದ್ದಾರೆ. ಇಲ್ಲಿಯವರೆಗೆ `ಟಾಕ್ಸಿಕ್’ ಚಿತ್ರತಂಡ ನಯನತಾರಾ ಭಾಗವಹಿಸಿರುವ ಕುರಿತು ಅಧಿಕೃತವಾಗಿ ಘೊಷಿಸಿಲ್ಲ. ಆದರೂ ನಯನತಾರ (Nayantara) ನಟಿಸುತ್ತಿರುವ ಸಂಗತಿಯಂತೂ ನಿಜ ಎಂದು ತಿಳಿದು ಬಂದಿದೆ.
ಬೆಂಗಳೂರಿನ ಹೆಚ್‌ಎಂಟಿ ಗ್ರೌಂಡ್ ನಲ್ಲಿ ಹಾಕಲಾದ ಬೃಹತ್ ಸೆಟ್ ನಲ್ಲಿ ಟಾಕ್ಸಿಕ್ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಸದ್ಯ ಪ್ಯಾಲೇಸ್ ಗ್ರೌಂಡ್‌ನಲ್ಲಿ ಸಾಹಸ ಸನ್ನಿವೇಶ ನಡೆಯುತ್ತಿದೆ. ಬೆಂಗಳೂರಲ್ಲೇ ಬಹುತೇಕ ನಡೆಯುವ ಶೂಟಿಂಗ್ ಆಗಿರುವುದರಿಂದ ಚಿತ್ರದಲ್ಲಿರುವ ನಟ ನಟಿಯರನ್ನು ಯಶ್ ಆಹ್ವಾನಿಸುತ್ತಿದ್ದಾರೆ. ನಯನತಾರಾ ಟಾಕ್ಸಿಕ್ ಟೀಮ್ ಸೇರಿರುವ ಸುಳಿವು ಸಿಕ್ಕಿದೆ.
ಗೀತು ಮೋಹನ್‌ದಾಸ್ ನಿರ್ದೇಶಿಸುತ್ತಿರುವ `ಟಾಕ್ಸಿಕ್’ ಚಿತ್ರವನ್ನ ಯಶ್ ತಮ್ಮದೇ ಸ್ವಂತ ಬ್ಯಾನರ್ ಜೊತೆ ಕೆವಿಎನ್ ಫಿಲಂಸ್ ಜೊತೆ ನಿರ್ಮಿಸುತ್ತಿದ್ದಾರೆ. ಈ ಚಿತ್ರ 2025 ಏಪ್ರಿಲ್ 10ಕ್ಕೆ ಬಿಡುಗಡೆಯಾಗಲು ಸಿದ್ಧವಾಗುತ್ತಿದೆ, ಸದ್ಯ ಮೊದಲ ಶೆಡ್ಯೂಲ್ ಚಿತ್ರೀಕರಣ ನಡೆಯುತ್ತಿದೆ. ನಯನತಾರಾ ಜೊತೆ ಜೊತೆಗೆ ಬಾಲಿವುಡ್ ನಟಿ ಕಿಯಾರಾ ಅಡ್ವಾನಿ ಕೂಡ ನಟಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.