‘ದಾದಾ’ ಬಗ್ಗೆ ಅವಹೇಳನಕಾರಿ ಹೇಳಿಕೆ : ರಂಗರಾಜನ್ ಗೆ ‘ರಾಖಿಭಾಯ್’ ವಾರ್ನಿಂಗ್
ಸ್ಯಾಂಡಲ್ ವುಡ್ ನ ಯಜಮಾನ ವಿಷ್ಣು ದಾದನ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ತೆಲುಗು ನಟ ವಿಜಯ್ ರಂಗರಾಜು ವಿರುದ್ಧ ಅನೇಕ ಸ್ಯಾಂಡಲ್ ವುಡ್ ನಟರು ಆಕ್ರೋಶ ಹೊರಹಾಕಿದ್ದಾರೆ. ಕನ್ನಡಾಭಿಮಾನಿಗಳಂತು ನಿಗಿ ನಿಗಿ ಕೆಂಡಕಾರ್ತಿದ್ದಾರೆ. ಇದೀಗ ರಾಕಿಂಗ್ ಸ್ಟಾರ್ ಯಶ್ ಅವರು ಕೂಡ ರಂಗರಾಜನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ಆಕ್ರೋಶ ಹೊರಹಾಕಿರೋ ರಾಖಿ ಬಾಯ್ ‘ಸರಿದಾರಿಯಲ್ಲಿ ನಡೆಯುವವರು ಬೆವರುಹರಿಸಿ ಹಂತಹಂತವಾಗಿ ಬೆಳೆದು ಹೆಸರು ಮಾಡಿ ಉಳಿದುಕೊಳ್ಳುತ್ತಾರೆ, ಅಡ್ಡದಾರಿಯಲ್ಲಿ ನಡೆಯುವವರು ಅಂತ ಹೆಸರುಗಳನ್ನು ಬಳಸಿಕೊಳ್ಳಲು ಹೋಗಿ ಬದಿಯಲ್ಲೇ, ಉಳಿದುಬಿಡುತ್ತಾರೆ. ವಿಷ್ಣು ಸರ್ ಕನ್ನಡ ನಾಡು ಕಂಡ ಮಹಾನ್ ಸಾಧಕರು ಅವರ ಶ್ರಮ ಪ್ರತಿಭೆ ಹಾಗೂ ನಟನೆಯ ಜೊತೆಜೊತೆಯಾಗಿ ಅವರ ಬದುಕು ಅವರ ವ್ಯಕ್ತಿತ್ವದಿಂದ ನಮ್ಮ ಮನೆ ಮನದಲ್ಲಿ ಅಜರಾಮರವಾಗಿರುವವರು.
ಅಂತಹ ಸಾಧಕರನ್ನು ನಿಂದಿಸಿ ಹೆಸರು ಮಾಡ ಬಯಸುವ ಹೀನಮಟ್ಟಕ್ಕೆ ಇಳಿಯುವವನು ಕಲಾವಿದನಲ್ಲ. ಕನ್ನಡ ಚಿತ್ರರಂಗ ಎಲ್ಲಾ ಚಿತ್ರರಂಗಗಳ ಜೊತೆ ಪರಸ್ಪರ ಹೊಂದಾಣಿಕೆ ಹಾಗೂ ಗೌರವವನ್ನು ಕಾಪಾಡಿಕೊಂಡು ಬಂದಿದೆ. ಅದು ಇಂತವರಿಂದ ತಪ್ಪುದಾರಿಗೆ ಹೋಗಬಾರದು. ಆ ವ್ಯಕ್ತಿ ಕ್ಷಮೆ ಕೇಳಿ ತಮ್ಮ ಅಸಮಂಜಸ ಮಾತುಗಳನ್ನು ಹಿಂಪಡೆಯಬೇಕು’ ಎಂದು ಆಕ್ರೋಶ ಹೊರಹಾಕಿದ್ದಾರೆ.
ಅಯ್ಯಯ್ಯೋ ನನ್ನ ಕ್ಷಮಿಸ್ಬಿಡಿ, ನಾನು ಪಾಪ ಮಾಡ್ಬಿಟ್ಟೆ : ವಿಜಯರಂಗ ಕಣ್ಣೀರು
ಅಂದ್ಹಾಗೆ ನಟ ಜಗ್ಗೇಶ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಅನಿರುದ್ಧ , ಪ್ರಥಮ್, ಸುಮಲತಾ, ಗಣೇಶ್, ರಿಷಭ್ ಶೆಟ್ಟಿ, ಡಾಲಿ ಹೀಗೆ ಅನೇಕರು ವಿಜಯರಂಗರಾಜನ್ ವಿರುದ್ಧ ಗುಡುಗಿದ್ದರು. ಇನ್ನೂ ಇತ್ತೀಚೆಗೆ ಸುದೀಪ್ ಅವರು ಕೊಟ್ಟಿದ್ದ ಡೋಸ್ ಗೆ ವಿಜಯ್ ರಂಗರಾಜಜನ್ ಬೆದರಿದ್ದಾರೆ. ಬದುಕಿದ್ದಾಗ ಮಾತನಾಡೋದು ಗಂಡಸ್ತನ ಅಂತ ಕಿಚ್ಚ ವಿಜಯ್ ರಂಗರಾಜನ್ ಚಳಿ ಬಿಡಿಸಿದ್ದರು.
ವ್ಹಾ… ಹೊಸ ಸಾಧನೆಯತ್ತ ಕಿಚ್ಚನ ‘ಫ್ಯಾಂಟಮ್’… ಈ ಸಾಧನೆಯಲ್ಲೇ ಭಾರತದ 2ನೇ ಸಿನಿಮಾ…!
ಅಂದ್ಹಾಗೆ ಕನ್ನಡ ಅಭಿಮಾನಿಗಳು ಕನ್ನಡ ತಾರೆಯರನ್ನ ಕೆಣಕ್ಕಿದ್ದ ವಿಜಯ್ ರಂಗರಾಜನ್ ಈಗ ಪಶ್ಚಾತಾಪ ಪಡ್ತಿದ್ದಾರೆ. ಮಮಡಿಯೂರಿ ಕನ್ನಡಾಭಿಮಾನಿಗಳ ಬಳಿ ಕ್ಷಮೆಯಾಚಿಸಿರುವ ರಂಗರಾಜನ್ ನಾನು ಪಾಪ ಮಾಡಿಬೆಟ್ಟೆ, ಅದಕ್ಕೆ ಶಿಕ್ಷೆಯಾಗಿದೆ. ನನಗೆ ಕೊರೊನಾ ಪಾಸಿಟಿವ್ ಆಗಿದೆ. ನನ್ನ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ನನ್ನನ್ನು ಕ್ಷಮಿಸಿಬಿಡಿ. ನಾನು ದಾದನ ಬಗ್ಗೆ ಹೇಳಿದ್ದು ಸುಳ್ಳು ಎಂದು ತಪ್ಪೊಪ್ಪಿಕೊಂಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel