ಬಿಗ್, ಬಿಗ್, ಬಿಗ್, ಕೆಜಿಎಫ್ ಚಿತ್ರತಂಡದಿಂದ ಬಿಗ್ ಅಪ್ಡೇಟ್…..
ಇಂದು ಅಪ್ಡೇಟ್ ಬರುತ್ತೆ ನಾಳೆ ಅಪ್ಡೇಟ್ ಬರುತ್ತೆ ಅಂತ ಜಾತಕ ಪಕ್ಷಿಯಂತೆ ಕಾದು ಕುಳಿತಿದ್ದ ಕೆಜಿಎಫ್ ಅಭಿಮಾನಿಗಳಿಗೆ ಕೊನೆಗೆ ಸಿಹಿ ಸುದ್ದಿ ಸಿಕ್ಕದೆ. ಸ್ಯಾಂಡಲ್ವುಡ್ನ ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ತಂಡದಿಂದ ಬಿಗ್ ಅಪ್ಡೇಟ್ ಸಿಕ್ಕಿದೆ. ಇದೇ ತಿಂಗಳ 27 ನೇ ತಾರಿಖಿನಂದು ಕೆಜಿಎಫ್ ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ. ಹೀಗೆಂದು ಕೆಜಿಎಫ್ ನಿರ್ಮಾಣದ ಹೊಣೆ ಹೊತ್ತಿರುವ ಹೊಂಬಾಳೆ ಫಿಲ್ಸ್ಮ್ ಸಂಸ್ಥೆ ಇಂದು ಅಧಿಕೃತವಾಗಿ ತಿಳಿಸಿದೆ.
https://twitter.com/prashanth_neel/status/1499263301523423232
ಕೆಜಿಎಫ್ 2’ ಚಿತ್ರ ಬಿಡುಗಡೆಗೂ ಮುನ್ನ ಭಾರಿ ಸದ್ದು ಮಾಡುತ್ತಿರುವ ಚಿತ್ರ. ಯಶ್ ನಟನೆಯ ‘ಕೆಜಿಎಫ್: ಚಾಪ್ಟರ್ 2’ ಕಣ್ತುಂಬಿಕೊಳ್ಳಲು ಇಡೀ ದೇಶವೇ ಕಾಯುತ್ತಿದೆ. ಇದೇ ಮಾ. 27ರಂದು ಸಂಜೆ 6.40 ಚಿತ್ರದ ಟ್ರೇಲರ್ ಬಿಡುಗಡೆ ಮಾಡುವುದಾಗಿ ಅಭಿಮಾನಿಗಳಿಗೆ ದೊಡ್ಡ ಸಿಗ್ನಲ್ ಕೊಟ್ಟಿದೆ.
ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾ ಈಗಾಗಲೇ ಬಿಡುಗಡೆಯಾಗಬೇಕಿತ್ತು ಕೊರೊನಾ ಕಾರಣದಿಂದ ಚಿತ್ರದ ಬಿಡುಗಡೆಯನ್ನು ಈಗಾಗಲೇ ಹಲವು ಬಾರಿ ಮುಂದೂಡಲಾಗಿತ್ತು. ಇಷ್ಟು ದಿನ ನಿರಾಸೆಗೊಂಡಿದ್ದ ಅಭಿಮಾನಿಗಳಿಗೆ ಟ್ರೇಲರ್ ಸುದ್ದಿ ಕೇಳಿ ಚೈತನ್ಯ ಬಂದಂತಾಗಿದೆ.







