ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬಕ್ಕೆ ರಿವೀಲ್ ಆದ ʼಟಾಕ್ಸಿಕ್ʼ (Toxic Movie) ಬರ್ತ್ ಡೇ ಪೀಕ್ ಹೊಸ ದಾಖಲೆಯನ್ನು ಬರೆದಿದೆ. ಬರ್ತ್ ಡೇ ಪೀಕ್ ಗ್ಲಿಂಪ್ಸ್ನಲ್ಲಿ ಯಶ್ ಹಿಂದೆಂದೂ ಕಾಣಿಸಿಕೊಳ್ಳದ ಬೋಲ್ಡ್ & ಡ್ಯಾಶಿಂಗ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಪಬ್ವೊಂದರಲ್ಲಿ ಪಾರ್ಟಿ ಮೂಡ್ನಲ್ಲಿ ಯಶ್ ಹಾಟ್ ಬೆಡಗಿಯರ ಜತೆ ಕಾಣಿಸಿಕೊಂಡಿದ್ದಾರೆ. ಗನ್, ಗಾಂಜಾ ಹಾಗೂ ಗರ್ಲ್ಸ್ ಸುತ್ತ ಬರ್ತ್ ಡೇ ಪೀಕ್ ಗ್ಲಿಂಪ್ಸ್ ತೋರಿಸಲಾಗಿದೆ.
ಇಂಟರ್ನೆಟ್ ದಾಖಲೆ:ಯಶ್ ಹುಟ್ಟುಹಬ್ಬಕ್ಕೆ ರಿಲೀಸ್ ಆದ ಈ ಗ್ಲಿಂಪ್ಸ್ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಇಂಟರ್ನೆಟ್ ಧೂಳು ಎಬ್ಬಿಸಿದೆ. ಹಲವು ದಾಖಲೆಗಳನ್ನು ಪುಡಿಗಟ್ಟಿ, ತನ್ನದೇ ಆದ ಹೊಸ ದಾಖಲೆಯನ್ನು ಬರೆದಿದೆ. ‘ಟಾಕ್ಸಿಕ್ʼ ಗ್ಲಿಂಪ್ಸ್ 13 ಗಂಟೆಯಲ್ಲಿ ಮಿಲಿಯನ್ ಗಟ್ಟಲೆ ವೀವ್ಸ್ ಪಡೆದುಕೊಂಡಿದೆ.
ʼಪುಷ್ಪ-2ʼ ದಾಖಲೆ ಮುರಿದ ʼಟಾಕ್ಸಿಕ್ʼ:ಟಾಕ್ಸಿಕ್ಸ್ ಗ್ಲಿಂಪ್ಸ್ 24 ಗಂಟೆಗಳಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ ಗ್ಲಿಂಪ್ಸ್ ಆಗಿ ಹೊರಹೊಮ್ಮಿದೆ. ಆ ಮೂಲಕ ಈ ಹಿಂದಿನ ʼಪುಷ್ಪ-2ʼ ದಾಖಲೆಯನ್ನು ʼಟಾಕ್ಸಿಕ್ʼ ಬ್ರೇಕ್ ಮಾಡಿದೆ. ʼಪುಷ್ಪ-2ʼ ಚಿತ್ರದ ಹಿಂದಿ ಆವೃತ್ತಿಯ ಗ್ಲಿಂಪ್ಸ್ 24 ಗಂಟೆಯಲ್ಲಿ 27.67 ಮಿಲಿಯನ್ ವೀಕ್ಷಣೆ ಆಗಿತ್ತು. ಟಾಕ್ಸಿಕ್ 13 ಗಂಟೆಯಲ್ಲೇ 28M+ ವೀಕ್ಷಣೆ ಕಂಡು ಈ ದಾಖಲೆಯನ್ನು ಬ್ರೇಕ್ ಮಾಡಿದೆ.
ಬಹು ನಿರೀಕ್ಷೆಯನ್ನು ಹುಟ್ಟಿಸಿರುವ ʼಟಾಕ್ಸಿಕʼ ಏಪ್ರಿಲ್ 10ಕ್ಕೆ ರಿಲೀಸ್ ಆಗಬೇಕಿತ್ತು. ಆದರೆ ರಿಲೀಸ್ ಡೇಟ್ ಮುಂದೂಡಿಕೆ ಆಗಿದೆ. ಕೆಲ ಮೂಲಗಳ ಪ್ರಕಾರ ಈ ವರ್ಷದ ಕೊನೆಯಲ್ಲಿ ಚಿತ್ರ ರಿಲೀಸ್ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.