ರಾಹುಲ್ ಹಿಂದು ಅಲ್ಲ, ಬಿಟೌನ್ ಖಾನ್ ಗಳು ಅಫ್ಗಾನ್ ಗೆ ಹೋಗಲಿ : ಯತ್ನಾಳ್
ವಿಜಯಪುರ : ಬಾಲಿವುಡ್‍ನ ಸೂಪರಸ್ಟಾರ್ ಖಾನ್‍ಗಳು ಈಗ ಅಪ್ಘಾನಿಸ್ತಾನಕ್ಕೆ ಹೋಗಲಿ. ಭಾರತ ಸುರಕ್ಷಿತ ಅಲ್ಲ ಅನ್ನೋ ಖಾನ್ ನಟರು ಅಫ್ಘಾನ್ ಗೆ ಹೋಗಿ ಜೀವನ ಮಾಡಲಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಜಯಪುರದಲ್ಲಿ ಆಫ್ಘಾನ್ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಬುದ್ಧಿಜೀವಿಗಳು ಲದ್ದಿ ತಿಂದಿದ್ದಾರಾ? ಬುದ್ಧಿ ಜೀವಿಗಳು ತಾಲಿಬಾನಿ ಸಂತಾನ. ಅಫ್ಘಾನಿಸ್ತಾನದ ತಾಲಿಬಾನಿಗಳ ಬಗ್ಗೆ ರಾಹುಲ್ ಗಾಂಧಿ ಯಾಕೆ ಮಾತಾಡಲ್ಲ..? ಡಿಕೆಶಿ ಯಾಕೆ ಮಾತಾಡಲ್ಲ..? ಎಂದು ಪ್ರಶ್ನಿಸಿದರು.
ಪ್ರಧಾನಿ ಮೋದಿಯಿಂದ ನಾವು ಸುರಕ್ಷಿತವಾಗಿದ್ದೇವೆ ಎಂದು ಅಭಿಪ್ರಾಯಪಟ್ಟ ಯತ್ನಾಳ್, ಅಫ್ಘಾನ್ ನಲ್ಲಿರುವ ಹಿಂದು-ಸಿಖ್ ಬಿಟ್ಟರೆ ಉಳಿದ ಧರ್ಮದವರಿಗೆ ದೇಶಕ್ಕೆ ಪ್ರವೇಶ ಕೊಡಬಾರದು ಎಂದು ಒತ್ತಾಯಿಸಿದರು.
ಇದೇ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿದ ಯತ್ನಾಳ್, ರಾಹುಲ್ ಗಾಂಧಿ ಮುಸ್ಲಿಂ ಜನಾಂಗದವರಂತೆ ವರ್ತಿಸುತ್ತಾರೆ. ಅವರು ಹಿಂದೂನೂ ಅಲ್ಲ, ಕ್ರಿಶ್ಚಿಯನ್ನೂ ಅಲ್ಲ ಎಂದು ಕುಟುಕಿದರು. ಅಲ್ಲದೆ ಪ್ರಧಾನಿಗಳು ದೇಶದ ವಿರುದ್ಧ ಮಾತನಾಡೋ ಓವೈಸಿಗಳಂತವರಿಗೆ ಸರಿಯಾಗಿ ಪಾಠ ಕಲಿಸಬೇಕು. ಬಾಲಿವುಡ್‍ನ ಸೂಪರಸ್ಟಾರ್ ಖಾನ್‍ಗಳು ಈಗ ಅಪ್ಘಾನಿಸ್ತಾನಕ್ಕೆ ಹೋಗಲಿ. ಭಾರತ ಸುರಕ್ಷಿತ ಅಲ್ಲ ಅನ್ನೋ ಖಾನ್ ನಟರು ಅಫ್ಘಾನ್ ಗೆ ಹೋಗಿ ಜೀವನ ಮಾಡಲಿ ಎಂದು ಗರಂ ಆದರು.









