ಬೆಂಗಳೂರು: ಸೋಮವಾರ ನಡೆದಿದ್ದ ಸದನದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲನ್ ಯತ್ನಾಳ್ ಹಾಗೂ ಸಿಎಂ ಸಿದ್ದರಾಮಯ್ಯ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಆದರೆ, ಇಂದು ಯತ್ನಾಳ್ ಸಿಎಂ ಸಿದ್ದರಾಮಯ್ಯ ಅವರನ್ನು ಕೊಂಡಾಡಿದ್ದಾರೆ.
ಯತ್ನಾಳ್ ಅವರು ಅವರ ಕಾರ್ಯವೈಖರಿ ಕೊಂಡಾಡುತ್ತ ಸಿಎಂ ಅವರ ಕಾಲೇಳೆಯುವ ಕಾರ್ಯ ಮಾಡಿದರು. ಸಿದ್ದರಾಮಯ್ಯರ ಎರಡನೇ ಅವಧಿಯಲ್ಲಿ ಹಲವಾರು ಆರೋಪ ಕೇಳಿ ಬರುತ್ತಿವೆ. ಅದರೆ ಅವರ ಮೊದಲ ಅವಧಿಯಲ್ಲಿ ಯಾವುದೇ ಅರೋಪಗಳು ಕೇಳಿ ಬಂದಿರಲಿಲ್ಲ. ಸಿದ್ದರಾಮಯ್ಯ ಬಹಳ ಸ್ವಚ್ಛ ಆಡಳಿತ ನೀಡಿದ್ದರು. ಎಲ್ಲರಿಗೂ ಸ್ವಜನ ಪ್ರೀತಿ ಇದ್ದೇ ಇರುತ್ತದೆ ಎಂದು ಹೇಳಿದ ಅವರು, ಹಿಂದೆ ಮುಖ್ಯಮಂತ್ರಿಯಾಗಿದ್ದ ಜೆ.ಹೆಚ್. ಪಟೇಲ್ ಅವರ ಕಾರ್ಯವೈಖರಿ ಮತ್ತು ಆಡಿದ ಮಾತುಗಳನ್ನು ಸದನದಲ್ಲಿ ಹೇಳಿದರು.
ಸಿದ್ದರಾಮಯ್ಯ ನಾಡಿನ ಹಿರಿಯ ರಾಜಕಾರಣಿ ಮತ್ತು ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ 136ಸೀಟು ಸಿಗುವಲ್ಲಿ ಅವರ ಪಾತ್ರ ದೊಡ್ಡದಿದೆ. ಬಿಜೆಪಿ ಆಧಿಕಾರದಲ್ಲಿದ್ದಾಗ ಮಾಡಿದ ತಪ್ಪುಗಳಿಗೆ ಶಿಕ್ಷೆ ಅನುಭವಿಸುತ್ತಿದೆ. ಸಿದ್ದರಾಮಯ್ಯ ತಮ್ಮ ಮಂತ್ರಿಗಳು ತಪ್ಪು ಮಾಡಿದಾಗ ಅವರಿಗೆ ತಕ್ಕ ಶಿಕ್ಷೆ ವಿಧಿಸಲಿ, ಅದನ್ನು ಬಿಟ್ಟು ನಾನು ಹೇಳಿದ್ದನ್ನು ಉಲ್ಲೇಖಿಸಿ ಟೀಕಿಸುವುದು ಅವರ ಹಿರಿತನಕ್ಕೆ ಸರಿಯಲ್ಲ ಎಂದು ಕಾಲೇಳೆದರು.








