ಬಿಜೆಪಿಯಿಂದ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮತ್ತೊಮ್ಮೆ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸುವ ಹೇಳಿಕೆ ನೀಡಿದ್ದಾರೆ. ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮನ್ನು ಮತ್ತೆ ಬಿಜೆಪಿ ಪಕ್ಷಕ್ಕೆ ಕರೆತರಲು ಮಾಡಿದ ಪ್ರಯತ್ನಗಳ ಬಗ್ಗೆ ಬಾಯ್ಬಿಟ್ಟಿದ್ದಾರೆ.
ಯತ್ನಾಳ್ ಹೇಳುವಂತೆ, ಬಿಜೆಪಿಗೆ ವಾಪಸ್ ಬನ್ನಿ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತಮ್ಮನ್ನು ಸಂಪರ್ಕಿಸಿದ್ದಾರೆ. ಇದಲ್ಲದೆ, ನಿಯೋಗ ಕರೆದುಕೊಂಡು ಬೆಂಗಳೂರಿನಿಂದಲೇ ಅಮಿತ್ ಶಾ ಅವರ ಬಳಿಗೆ ಹೋಗೋಣ ಎಂದು ಅಶೋಕ್ ಸಲಹೆ ನೀಡಿದ್ದಾರೆ ಎಂದು ಯತ್ನಾಳ್ ಹೇಳಿದ್ದಾರೆ.
ಆದರೆ ತಮ್ಮ ವಾಪಸಿಗೆ ದೊಡ್ಡ ಷರತ್ತು ಇಟ್ಟಿರುವ ಯತ್ನಾಳ್, ನನ್ನನ್ನು CM ಮಾಡ್ತೀನಿ ಅಂದ್ರೆ ಮಾತ್ರ ಬರುತ್ತೇನೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಈ ಮಾತಿನಿಂದ ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆ ಆರಂಭವಾಗಿದೆ.
ಈ ವಿಷಯವನ್ನು ಅಮಿತ್ ಶಾ ಅವರೊಂದಿಗೇ ನೇರವಾಗಿ ಚರ್ಚಿಸಬೇಕೆಂದು ಆರ್. ಅಶೋಕ್‌ಗೆ ಸೂಚಿಸಿದ್ದಾಗಿ ಯತ್ನಾಳ್ ತಿಳಿಸಿದ್ದಾರೆ. ಅವರ ಹೇಳಿಕೆಗಳಿಂದ ಬಿಜೆಪಿ ಶಿಬಿರದಲ್ಲಿ ಕುತೂಹಲ ಹಾಗೂ ಆತಂಕ ಎರಡೂ ಹೆಚ್ಚಿದೆ.








