ಯಾವತ್ತಿದ್ದರೂ ಯಡಿಯೂರನವರಿಗೆ ನನ್ನ ಬೆಂಬಲ : ಎನ್.ಮಹೇಶ್
ಚಾಮರಾಜನಗರ : ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಬಿಜೆಪಿ ಸೇರ್ತಾರೆ ಎಂಬ ಸುದ್ದಿ ರಾಜ್ಯ ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಸ್ವತಃ ಎನ್.ಮಹೇಶ್ ಪ್ರತಿಕ್ರಿಯಿಸಿ, ಬಿಜೆಪಿ ಸೇರುವ ಕುರಿತು ಅಂತಿಮ ತೀರ್ಮಾನ ಮಾಡಿಲ್ಲ. ಆದರೆ ನನ್ನ ಬೆಂಬಲ ಯಾವತ್ತಿದ್ದರೂ ಸಿಎಂ ಯಡಿಯೂರಪ್ಪ ಅವರಿಗೆ ಎಂದು ಹೇಳಿದ್ದಾರೆ.
ನಿನ್ನೆ ಚಾಮರಾಜನಗರದಲ್ಲಿ ನಡೆದ ಬಿಜೆಪಿ ಜನಸೇವಕ ಸಮಾವೇಶದಲ್ಲಿ ಭಾಗವಹಿಸುವ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವರು ಹಾಗೂ ಮುಖಂಡರಿಗೆ ಸ್ವಾಗತ ಕೋರುವ ಫ್ಲೆಕ್ಸ್ ನಲ್ಲಿ ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಅವರ ಫೋಟೊವೂ ಕಂಡು ಬಂದಿತ್ತು.
ಅಬ್ಬಬ್ಬಾ ಏನ್ ದುಬಾರಿ ಫೋನು : 97 ಕೋಟಿಯ ಫೋನ್ ನ ವಿಶೇಷತೆಗಳೇನು..! Black diamond Iphone 5
ಇದು ಎನ್ ನಾಗೇಶ್ ಅವರು ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಹಾಗೇ ಅವರು ಸಚಿವರಾಗುತ್ತಾರೆ ಎಂಬ ಊಹಾಪೋಹ ಕಾರಣವಾಗಿತ್ತು.
ಈ ಬಗ್ಗೆ ಚಾಮರಾಜನಗರದಲ್ಲಿ ಮಾತನಾಡಿದ ಅವರು, ಬಿಜೆಪಿ ಸೇರ್ಪಡೆ ಕುರಿತು ಮುಂದೆ ಯೋಚಿಸುತ್ತೇನೆ. ನಾನು ಸಿಎಂ ಯಡಿಯೂರಪ್ಪ ಅವರ ಬೆಂಬಲಕ್ಕಿದ್ದೇನೆ.
ನನ್ನನ್ನು ಮಂತ್ರಿ ಮಾಡುವುದು-ಬಿಡುವುದು ಮುಖ್ಯಮಂತ್ರಿ ಅವರಿಗೆ ಬಿಟ್ಟ ವಿಚಾರ. ಮೈತ್ರಿ ಸರ್ಕಾರ ಪತನದ ವೇಳೆ ನಾನು ಬಿಜೆಪಿ ಬೆಂಬಲಿಸಿ ಗೈರಾಗಿರಲಿಲ್ಲ.
ಯಾವ ಪಕ್ಷದ ಪರ-ವಿರೋಧವಾಗಿಯೂ ಮತ ಹಾಕಿಲ್ಲ. ಆದರೆ, ಈಗ ನಾನು ಸ್ವತಂತ್ರ ಶಾಸಕನಾಗಿದ್ದು, ಯಡಿಯೂರಪ್ಪ ಅವರಿಗೆ ಸಂಪೂರ್ಣ ಬೆಂಬಲ ಕೊಟ್ಟಿದ್ದೇನೆ, ಸರ್ಕಾರ ಸುಭದ್ರವಾಗಿರಲಿದೆ ಎಂದು ಹೇಳಿದರು.
ಬಿಜೆಪಿ ಬ್ಯಾನರಿನಲ್ಲಿ ಫೋಟೋ ಹಾಕಿದ್ದರ ಬಗ್ಗೆ ಮಾತನಾಡಿ, ನನ್ನ ಮೇಲಿನ ಅಭಿಮಾನದಿಂದ ಭಾವಚಿತ್ರ ಬಳಸಿರಬಹುದು ಎಂದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









