ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರಕ್ಕೆ 1 ವರ್ಷ ತುಂಬಿದ ಬೆನ್ನಲ್ಲೇ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಆಡಳಿತಕ್ಕೆ ಮೇಜರ್ ಸರ್ಜರಿ ಮಾಡಿದ್ದಾರೆ.
ರಾಜ್ಯದ 12 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಲಾಗಿದೆ. ಈ ಹಿಂದೆ ಕಲಬುರಗಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ವರ್ಗಾವಣೆ ಮಾಡಲಾಗಿತ್ತು. ಆದರೆ, ಸ್ಥಳೀಯರೇ ಈ ಅಧಿಕಾರಿಗಳ ವರ್ಗಾವಣೆ ಮಾಡದಂತೆ ಸರ್ಕಾರದ ಮೇಲೆ ಒತ್ತಡ ಹೇರಿದ ಹಿನ್ನೆಲೆಯಲ್ಲಿ ವರ್ಗಾವಣೆ ಆದೇಶ ವಾಪಸ್ ಪಡೆಯಲಾಗಿತ್ತು.
ಇದೀಗ ಸರ್ಕಾರಕ್ಕೆ ಒಂದು ವರ್ಷ ತುಂಬುತ್ತಿದ್ದಂತೆ ನಿನ್ನೆ ನಿಗಮ-ಮಂಡಳಿಗಳ ಅಧ್ಯಕ್ಷರ ನೇಮಕ ಮಾಡಿ ಆದೇಶ ಹೊರಡಿಸಲಾಗಿತ್ತು. ಇದರ ಬೆನ್ನಲ್ಲೇ ಆಡಳಿತಕ್ಕೂ ಯಡಿಯೂರಪ್ಪ ಮೇಜರ್ ಸರ್ಜರಿ ಮಾಡಿದ್ದಾರೆ.
ವರ್ಗಾವಣೆಯಾದ ಅಧಿಕಾರಿಗಳು ಹಾಗೂ ಹುದ್ದೆಯ ವಿವರ ಕೆಳಗಿನಂತಿದೆ..
1. ಡಾ.ರಾಜಕುಮಾರ್ ಖತ್ರಿ-ಕಾರ್ಮಿಕ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ(ಹಿಂದೆ ಕೃಷಿ ಇಲಾಖೆ)
ಮಹೇಶ್ವರ ರಾವ್-ಕಾರ್ಮಿಕ ಇಲಾಖೆ ಸೇವೆಯಿಂದ ಬಿಡುಗಡೆ
2. ಡಾ.ಎನ್ ನಾಗಲಾಂಬಿಕಾ ದೇವಿ-ಸಮಾಜ ಕಲ್ಯಾಣ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ(ಹಿಂದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ)
3. ಮನೋಜ್ ಜೈನ್-ಬಿಬಿಎಂಪಿ ವಿಶೇಷ ಆಯುಕ್ತ (ಹಿಂದೆ ಸಾರ್ವಜನಿಕ ಲ್ಯಾಂಡ್ ಕಾರ್ಪೋರೇಶನ್ ಎಂಡಿ)
4. ರಾಜೇಂದ್ರ ಚೋಳನ್-ಬಿಬಿಎಂಪಿ ವಿಶೇಷ ಆಯುಕ್ತ(ಹಣಕಾಸು-ಐಟಿ) (ಹಿಂದೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಎಂಡಿ)
4. ವಿನೋತ್ ಪ್ರಿಯಾ-ನಿರ್ದೇಶಕರು, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ (ಹಿಂದೆ ಚಿತ್ರದುರ್ಗ ಡಿಸಿ)
5. ಡಾ.ಬಿ.ಆರ್ ಮಮತಾ-ನಿರ್ದೇಶಕರು, ಸಕಾಲ ಮಿಷನ್ (ಹಿಂದೆ ಮೈಶುಗರ್ ಎಂಡಿ)
6. ಸಿಂಧೂ ಬಿ.ರೂಪೇಶ್-ನಿರ್ದೇಶಕರು, ವಿದ್ಯುನ್ಮಾನ ನಾಗರಿಕ ವಿತರಣಾ ಸೇವೆ( ಹಿಂದೆ ದಕ್ಷಿಣ ಕನ್ನಡ ಡಿಸಿ)
7. ಪೊಮ್ಮಲಾ ಸುನೀಲ್ ಕುಮಾರ್-ವಿಜಯಪುರ ಜಿಲ್ಲಾಧಿಕಾರಿ (ಹಿಂದೆ ಬಿಬಿಎಂಪಿ ವಿಶೇಷ ಆಯುಕ್ತ)
8. ಡಾ.ಕೆ.ವಿ ರಾಜೇಂದ್ರ-ದಕ್ಷಿಣ ಕನ್ನಡ ಜಿಲ್ಲಾಧಿಕಾರಿ (ಹಿಂದೆ ಬೆಳಗಾವಿ ಜಿಪಂ ಸಿಇಒ)
9. ದರ್ಶನ್ ಹೆಚ್.ವಿ -ಬೆಳಗಾವಿ ಜಿಪಂ ಸಿಇಒ (ಮೊದಲು ಕೋಲಾರ ಜಿಪಂ ಸಿಇಒ)
10. ಡಾ.ಹೆಚ್.ಎನ್ ಗೋಪಾಲಕೃಷ್ಣ-ಎಂಡಿ, ಮೈಶುಗರ್
11. ಕವಿತಾ ಎಸ್.ಮನ್ನಿಕೇರಿ-ಚಿತ್ರದುರ್ಗ ಜಿಲ್ಲಾಧಿಕಾರಿ (ಹಿಂದೆ ಕೆಎಸ್ಆರ್ಟಿಸಿ ನಿರ್ದೇಶಕರು)
12. ಪಾಟೀಲ್ ಯಲಗೌಡ-ಜಂಟಿ ನಿರ್ದೇಶಕರು, ಮೈಸೂರು ಆಡಳಿತ ಮತ್ತು ತರಬೇತಿ ವಿಭಾಗ(ಹಿಂದೆ ವಿಜಯಪುರ ಡಿಸಿ)








