ಸರ್ಕಾರ ಸತ್ತುಹೋಗಿದೆ ಯಡಿಯೂರಪ್ಪ ಅಸಮರ್ಥ ಸಿಎಂ : ಸಿದ್ದರಾಮಯ್ಯ Siddaramaiah
ಕೋಲಾರ : ಇಂತಹ ಮಾನಗೆಟ್ಟ ಸರ್ಕಾರ, ಸಚಿವರನ್ನು ಇಲ್ಲಿವರೆಗೂ ನೋಡಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ರಾಜ್ಯಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೋಲಾರದ ಕೆಜಿಎಫ್ ನಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರಕ್ಕೆ ಕೊರೊನಾ ಎರಡನೇ ಅಲೆ ಬರುವ ಮುನ್ಸೂಚನೆ ಇದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ.
ಮಾನಗೆಟ್ಟ ಸರ್ಕಾರವನ್ನು ನಾನು ನೋಡಿರಲಿಲ್ಲ. ಸುಳ್ಳೇ ಅವರ ಮನೆ ದೇವರು, ಸರ್ಕಾರ ನಡೆಸಕ್ಕಾಗಲ್ಲ ಎಂದರೆ ಬಿಟ್ಟು ಹೋಗಿ ಎಂದಿದ್ದೆ. ಆದರೆ ಬಿಟ್ಟು ಹೋಗಿಲ್ಲ ಇಂತಹ ಸತ್ತಿರುವ ಸರ್ಕಾರವನ್ನು ನಾನು ನೋಡಿರಲಿಲ್ಲ ಎಂದು ಗುಡುಗಿದರು.
ನಮ್ಮ ರಾಜ್ಯಕ್ಕೆ ಆಕ್ಸಿಜನ್ 1700 ಮೆಟ್ರಿಕ್ ಟನ್ ಬೇಕು. ಅಷ್ಟು ನಮಗೆ ಸಿಗುತ್ತಿಲ್ಲ. ಸರ್ಕಾರ ಸತ್ತುಹೋಗಿದೆ ಯಡಿಯೂರಪ್ಪ ಒಬ್ಬ ಅಸಮರ್ಥ ಮುಖ್ಯಮಂತ್ರಿ.
ಇಂಥ ಬಂಡರನ್ನು ನೋಡಿಲ್ಲ, ನಿಮ್ಮ ಕೈಲಿ ಆಗೋದಿಲ್ಲ ಅಂದ್ರೆ ಬಿಡಿ. ನೀವು ಅದನ್ನು ಮಾಡುತ್ತಿಲ್ಲ. ನಾವಾದ್ರು ಬಂದು ಏನಾದ್ರು ಮಾಡುತ್ತೇವೆ ಎಂದು ಚಾಟಿ ಬೀಸಿದರು.