ಭ್ರಷ್ಟರಲ್ಲಿ ದೊಡ್ಡ ಭ್ರಷ್ಟಚಾರಿ ಯಡಿಯೂರಪ್ಪ : ವಾಟಾಳ್ ನಾಗರಾಜ್ Yeddyurappa
ಮೈಸೂರು : ದೇಶದಲ್ಲಿ ಭ್ರಷ್ಟರಲ್ಲಿ ದೊಡ್ಡ ಭ್ರಷ್ಟಚಾರಿ ಯಡಿಯೂರಪ್ಪ ಅವರು. ವಿಧಾನಸೌಧದ ಮುಂದೆ ಬಸವಣ್ಣನವರ ಪ್ರತಿಮೆ ಇದ್ದರೂ, ಮತ್ತೊಂದು ಪ್ರತಿಮೆ ಮಾಡಲು ಹೊರಟಿದ್ದಾರೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಕಿಡಿಕಾರಿದ್ದಾರೆ.
ದೇಶದಲ್ಲಿ ಬೆಲೆ ಏರಿಕೆ ಖಂಡಿಸಿ ವಾಟಾಳ್ ನಾಗರಾಜ್ ಇಂದು ಬೆಂಗಳೂರಿನ ಹಾಡಿರ್ಂಗ್ ವೃತ್ತದ ಬಳಿ ಪ್ರತಿಭಟನೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಒಂದು ತಿಂಗಳೊಳಗೆ ಪತನವಾಗಲಿದೆ ಎಂದು ಭವಿಷ್ಯ ನುಡಿದರು.
ಇನ್ನು ದೇಶದಲ್ಲಿ ಭ್ರಷ್ಟರಲ್ಲಿ ದೊಡ್ಡ ಭ್ರಷ್ಟಚಾರಿ ಯಡಿಯೂರಪ್ಪ ಅವರು. ವಿಧಾನಸೌಧದ ಮುಂದೆ ಬಸವಣ್ಣನವರ ಪ್ರತಿಮೆ ಇದ್ದರೂ, ಮತ್ತೊಂದು ಪ್ರತಿಮೆ ಮಾಡಲು ಹೊರಟಿದ್ದಾರೆ. ಇದನ್ನು ಮಾಡಿದರೆ ಬಸವಣ್ಣನವರಿಗೆ ಅವಮಾನ ಮಾಡಿದಂತೆ ಎಂದು ಕಿಡಿಕಾರಿದರು.
ಇನ್ನು ದೇಶದಲ್ಲಿ ದಿನದಿಂದ ದಿನಕ್ಕೆ ಬೆಲೆ ಏರಿಕೆಯಾಗುತ್ತಿದೆ. ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.









